ಬ್ರಹ್ಮಾವರ: ಎಸ್.ಎಮ್.ಎಸ್ ಕಾಲೇಜಿನಲ್ಲಿಉದ್ಯೋಗಾಧಾರಿತ ಕೌಶಲ ಕುರಿತ ಮಾಹಿತಿ ಕಾರ್ಯಗಾರ

ಬ್ರಹ್ಮಾವರ: ಎಸ್.ಎಮ್.ಎಸ್ ಕಾಲೇಜು ಬ್ರಹ್ಮಾವರದ ಹೆಚ್.ಆರ್.ಡಿ ಸೆಲ್ ಹಾಗೂ ಎಮ್.ಐ.ಟಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಏ. 15 ರಂದು ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲಗಳ ಕುರಿತ ಮಾಹಿತಿ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್ , ಲರ್ನಿಂಗ್ ಇನ್ನೋವೇಷನ್ & ಕಂಟೆಂಟ್ ಡಿಜಿಟಲ್ ಸೊಲ್ಯೂಷನ್ಸ್ ಇದರ ನಿರ್ದೇಶಕ ದರ್ಶನ್ ಪಾಟೀಲ್ ಹಾಗೂ ಮ್ಯಾನೇಜರ್ ಮಧುಚಂದ್ರ ಕೊಟ್ಟಾರಿ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಉಡುಪ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ. ರಾಜಶೇಖರ್ ಹೆಬ್ಬಾರ್, ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿ ಆಲ್ವರಿಸ್ ಡಿ.ಸಿಲ್ವ, ಹೆಚ್.ಆರ್.ಡಿ ಸೆಲ್ ನ ಸಂಯೋಜಖೀ ಶ್ರೀಮತಿ ಟ್ವೀನಿ ಮರಿಯಾ ರೋಡ್ರಿಗಸ್ ಉಪಸ್ಥಿತರಿದ್ದರು