ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಸೆ. 20 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆ, ನೌಕಾ ಪಡೆ, ವಾಯುಪಡೆ ಹಾಗೂ ಸಿವಿಲ್ ಸರ್ವಿಸ್ ಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಭಾರತೀಯ ಸೇನೆಯ short service commission- 54 ನೇ ಕೋರ್ಸ್ ಗೆ ಆಯ್ಕೆಗೊಂಡಿರುವ ಭರತ್ ಬಾಬು ದೇವಾಡಿಗ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಷ್ಮಿಶ್ ಕುಂದರ್ ಹಾಗೂ ರಾಷ್ಟ್ರೀಯ ಕರಾಟೆ ಪಟು ಅಜಯ್ ದೇವಾಡಿಗ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರದ್ಧಾ ವಂದಿಸಿ, ಸಾನಿಕ ಶೆಟ್ಟಿ ಸ್ವಾಗತಿಸಿ, ಸಿಂಚನ ಅತಿಥಿಗಳನ್ನು ಪರಿಚಯಿಸಿದರು. ರಝಿನಾ ಬಾನು ನಿರೂಪಿಸಿದರು.