ಉಡುಪಿ:ಆ.15 ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ಡಯಾಬಿಟಿಸ್ ಪಾದಗಳ ರಕ್ಷಣೆ ಬಗ್ಗೆ ಮಾಹಿತಿ ಶಿಬಿರ ಹಾಗೂ ಉಚಿತ ಡಯಾಬಿಟಿಸ್ ಪಾದರಕ್ಷೆಗಳ ವಿತರಣೆ

ಉಡುಪಿ:ಇಂಚರ ಸರ್ಜಿಕಲ್ ಕ್ಲಿನಿಕ್ ಶ್ರೀ ವೈ ಎಲ್ ಎನ್ ಜ್ಯೋತಿಷ್ಕ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಎ ಜೆ ಆಲ್ಸೆ ರಸ್ತೆ, ಉಡುಪಿ ಇವರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಡಯಾಬಿಟಿಸ್ ಪಾದಗಳ ರಕ್ಷಣೆ ಬಗ್ಗೆ ಮಾಹಿತಿ ಶಿಬಿರ ಹಾಗೂ ಉಚಿತ ಡಯಾಬಿಟಿಸ್ ಪಾದರಕ್ಷೆಗಳ ವಿತರಣೆಯನ್ನು 15.08.25 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಇಂದಿರ ಚಂದಿರ ಸಭಾಭವನ, ಇಂಚರ ಸರ್ಜಕಲ್ ಕ್ಲಿನಿಕ್ ಉಡುಪಿ ಇಲ್ಲಿ ನಡೆಸಲಾಗುವುದು.

ಪಾದರಕ್ಷೆ ಪಡೆಯಲು ನೊಂದಾವಣೆ ಕಡ್ಡಾಯವಾಗಿರಬೇಕು. ನೋಂದಾಯಿಸಲು ಸಂಪರ್ಕಿಸಿ:📞 7676799859