ಕೊಡವೂರು ವಾರ್ಡ್ 20ನೇ ಬೃಹತ್ ಗ್ರಾಮ ಸಭೆ: ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕಾರ್ಯ ಸಂಪನ್ನ

 

ಉಡುಪಿ:  ಕೊಡವೂರು ವಾರ್ಡಿನ 20ನೇ ಗ್ರಾಮ ಸಭೆಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು. ಮಲ್ಪೆ ಠಾಣಾಧಿಕಾರಿ  ಶಕ್ತಿವೇಳು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಸಭೆಯನ್ನು ಮಾಡುವ ಮೂಲಕ ಜನರ ಕುಂದು ಕೊರತೆಗಳನ್ನು ತಿಳಿದು ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಬಹುದು. ಅಪರಾಧವಿಲ್ಲದ ಸಮಾಜ ನಿರ್ಮಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ನಾವು ನಮ್ಮ ಮಕ್ಕಳ ಬಗ್ಗೆ ಜವಾಬ್ದಾರಿಯಿಂದ ನಡೆಯಬೇಕು ಎಂದರು.

ನಗರಸಭಾ ಸದಸ್ಯ  ವಿಜಯ್ ಕೊಡವೂರು ಮಾತಾನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಮನೆ ಮನೆಗಳಿಗೆ ತಲುಪಿಸಲು ಇಂತಹ ಗ್ರಾಮ ಸಭೆಗಳು ಅವಶ್ಯವಾಗಿದೆ. ಈ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಯ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.

ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಕೃಷ್ಣಾ .ಎನ್ .ಅಮೀನ್ , ಭೋಜ ಪಾಲೇಕಟ್ಟೆ, ಶಂಕರ ನಾರಾಯಣ ದೇವಸ್ಥಾನ ಸಮಿತಿ ಸ್ಯಾ ಸದಸ್ಯೆ ಶ್ರೀಮತಿ ಚಂದ್ರಾವತಿ ಸುರೇಶ್ ಕಾನಾಂಗಿ, ಶ್ರೀ ರವಿ ಸಾಲಿಯಾನ್ ಕೊಡವೂರು, ಅಜಿತ್ ಕೊಡವೂರು, ಗುಣವತಿ ಯಶೋಧಾ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.