ಉಡುಪಿ: ಪ್ರಧಾನಿ ಮೋದಿಯವರ ಸ್ವಚ್ಛ ಭಾರತ್ ಕಲ್ಪನೆಯನ್ನು ಸಾಕಾರಗೊಳಿಸಲು ನಿತ್ಯ ಶ್ರಮಿಸುತ್ತಿರುವ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆ ಅತ್ಯಂತ ಅಕ್ಷಮ್ಯ ಎಂದು ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಹೇಳಿದ್ದಾರೆ.
ಹಲ್ಲೆ ನಡೆಸಿದ ವಿಕೃತ ಮನಸ್ಥಿತಿಯ ವ್ಯಾಪಾರಿಗಳು ಸ್ವಚ್ಛ ಉಡುಪಿಗೆ ಮಾರಕವಾಗಿದ್ದಾರೆ. ಇಂಥವರ ಮೇಲೆ ನಿಷ್ಪಕ್ಷಪಾತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣದ ಮಾಹಿತಿಯನ್ನು ಪ್ರಧಾನಿ ಮೋದಿಯವರ ಕಚೇರಿಗೂ ಕಳುಹಿಸಲಾಗುವುದು ಎಂದು ಭಟ್ ತಿಳಿಸಿದ್ದಾರೆ.