ಮಂಗಳೂರು: ಮಂಗಳೂರು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ವತಿಯಿಂದ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗುವಂತೆ ತರಬೇತಿ ನೀಡಿ, ಅವರನ್ನು ಕೈಗಾರಿಕಾ ತರಬೇತಿಗೆ ಅನುವುಗೊಳಿಸಿ, ಉದ್ಯೋಗ ಆವಕಾಶ ದೊರಕಿಸಿಕೊಡಲಾಗುವುದು ಹಾಗೂ ಎಸ್.ಸಿ. ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.
ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ಬೈಕಂಪಾಡಿ, ಮಂಗಳೂರು ದೂ.ಸಂಖ್ಯೆ: 0824-248003, ಮೊ.ನಂ: 9880591219, 7975621917 ಅನ್ನು ಸಂಪರ್ಕಿಸಬಹುದಾಗಿದೆ.