ದಿ ಕಾಶ್ಮೀರ್ ಫೈಲ್ಸ್‌ನ ಯಶಸ್ಸಿನ ನಂತರ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’ ಸೆ. 28 ರಂದು ದೇಶಾದ್ಯಂತ ತೆರೆ ಕಾಣಲಿದೆ. ವ್ಯಾಕ್ಸಿನ್ ವಾರ್ ಚಿತ್ರವು ಭಾರತೀಯ ಜೈವಿಕ ವಿಜ್ಞಾನಿಗಳ ಬಗ್ಗೆ ನೈಜ ಕಥಾನಕವನ್ನು ಹೊಂದಿದೆ . ಕೋವಿಡ್ -19 ಸಾಂಕ್ರಾಮಿಕದ ಅನಿಶ್ಚಿತತೆಯ ಸಮಯದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ವ್ಯಾಕ್ಸೀನ್ ಅನ್ನು ತಯಾರಿಸಿದ ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರಿಗೆ ಈ ಚಿತ್ರವು ಸಮರ್ಪಿಸಲ್ಪಟ್ಟಿದೆ.
ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ(NiV) ಹಾಗೂ ICMR ನ ವಿಜ್ಞಾನಿಗಳು ಸ್ವದೇಶಿ ನಿರ್ಮಿತ ಕೋವಿಡ್ ವ್ಯಾಕ್ಸೀನ್ ತಯಾರಿಕೆ ಮತ್ತು ಭಾರತದ ವ್ಯಾಕ್ಸೀನ್ ವಿರುದ್ದ ಹೆಣೆಯಲಾದ ಷಡ್ಯಂತ್ರಗಳ ಕುರಿತು ಚಿತ್ರವನ್ನು ಹೆಣೆಯಲಾಗಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ಭಾರತೀಯ ವಿಜ್ಞಾನಿಗಳ ಕಠಿಣ ಪರಿಶ್ರಮ, ಅವರ ತ್ಯಾಗದ ಬಗ್ಗೆ ಜಗತ್ತಿಗೆ ತಿಳಿಯಬೇಕು ಎನ್ನುವ ಉದ್ದೇಶದಿಂದ ಚಿತ್ರವನ್ನು ತಯಾರಿಸಲಾಗಿದೆ. 70% ಮಹಿಳೆಯರೇ ಇರುವ NiV ಸಂಸ್ಥೆಯ ತೆರೆಮರೆಯ ನಾಯಕರಿಗೆ ಈ ಚಿತ್ರ ಅರ್ಪಣೆಯಾಗಿದೆ ಎಂದು ನಿರ್ಮಾತೃ ಮತ್ತು ನಿರ್ದೇಶಕರ ಅಂಬೋಣ.
ಚಿತ್ರದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್, ರೈಮಾ ಸೇನ್, ಸಪ್ತಮಿ ಗೌಡ ಮತ್ತು ಪಲ್ಲವಿ ಜೋಶಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಟ್ರೈಲರ್ ಅದಾಗಲೇ 11+ ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.