ನವದೆಹಲಿ: ಭಾರತದ 17 ವರ್ಷದ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ ಅವರು ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಚೆಸ್ ಆಟಗಾರರಾಗಿದ್ದಾರೆ.
ಅಮೆರಿಕದ ಗ್ರ್ಯಾಂಡ್ಮಾಸ್ಟರ್ ಹಿಕಾರು ನಕಮುರಾ ವಿರುದ್ಧ ಅಂತಿಮ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ ಗುಕೇಶ್ ಸಂಭವನೀಯ 14 ಅಂಕಗಳಲ್ಲಿ ಒಂಬತ್ತು ಅಂಕಗಳನ್ನು ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚಾಂಪಿಯನ್ಶಿಪ್ಗಾಗಿ ಅವರು ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಈ ಗೆಲುವು ಅವರನ್ನು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ನಲ್ಲಿ ಜಯ ಸಾಧಿಸಿದ ಎರಡನೇ ಭಾರತೀಯರನ್ನಾಗಿಸಿದೆ. ಈ ಮೊದಲು ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಆಗುವ ಪ್ರಯಾಣದ ಸಮಯದಲ್ಲಿ 2014 ರಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಗುಕೇಶ್ ಅವರು 12 ನೇ ವಯಸ್ಸಿನಲ್ಲಿ ಚೆಸ್ ಇತಿಹಾಸದಲ್ಲಿ ಮೂರನೇ-ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. ಕಳೆದ ವರ್ಷ, ಅವರು ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.