ಭಾರತೀಯ ಅಂಚೆ ಇಲಾಖೆಯಲ್ಲಿಯೂ ಸಾರ್ವಜನಿಕರಿಗೆ ಅನುಕೂಲವಾಗುವ ಆರೋಗ್ಯ ವಿಮಾ ಯೋಜನೆಗಳಿವೆ. ಕಡಿಮೆ ಖರ್ಚಿನ ಆದ್ರೆ ಲಾಭದಾಯಕವಾಗಿರುವ ಒಂದು ಯೋಜನೆಯನ್ನು ಅಂಚೆ ಇಲಾಖೆ ಇದೀಗ ಪ್ರಸ್ತುತಪಡಿಸಿದೆ.
ಹೌದು ಭಾರತೀಯ ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) 756 ರೂ. ನಲ್ಲಿ ರೂ. 15 ಲಕ್ಷವರೆಗೆ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಲಭ್ಯವಿರುವ ಈ ಯೋಜನೆ ಇದು. ಗ್ರಾಮೀಣ ಮತ್ತು ನಗರ ಎಲ್ಲ ಜನರಿಗೂ ಈ ಯೋಜನೆ ಬೆಸ್ಟ್. ಬನ್ನಿ ಈ ಯೋಜನೆಯ ವಿವರಗಳನ್ನು ತಿಳಿದುಕೊಳ್ಳೋಣ.
ಏನಿದು ಯೋಜನೆ?: ಭಾರತದಲ್ಲಿ ಸಾಮಾನ್ಯ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ಭಾರವಾಗುತ್ತಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಭಾರತದಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ದರದಲ್ಲಿ ರೂ. 15 ಲಕ್ಷದ ವಿಮಾ ಭದ್ರತೆ ನೀಡುವ ‘ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ’ಯನ್ನು ಪ್ರಾರಂಭಿಸಿದೆ.
ಈ ಯೋಜನೆ ಟಾಪ್-ಅಪ್ ಪ್ಲ್ಯಾನ್ ಮೇಲೆ ನಡೆಯುತ್ತದೆ. ಅಂದರೆ, ನಿಮಗೆ ಆಯುಷ್ಮಾನ್, ಖಾಸಗಿ ಇನ್ಶೂರೆನ್ಸ್ ಅಥವಾ ಯಾವುದಾದರೂ ರೂಪದಲ್ಲಿ ಮೊದಲ ರೂ. 2 ಲಕ್ಷದ ವೆಚ್ಚವನ್ನು ನೀವು ಭರಿಸುವ ಅಗತ್ಯವಿದೆ. ಆದರೆ ಅದನ್ನು ಮೀರಿದ ಆಸ್ಪತ್ರೆ ವೆಚ್ಚಗಳನ್ನು ರೂ. 15 ಲಕ್ಷದವರೆಗೆ ಈ ಯೋಜನೆ ಭರಿಸುತ್ತದೆ. ಇದಕ್ಕೆ ಜೊತೆಯಾಗಿ, ನೀವು ಅಂಚೆ ಇಲಾಖೆ ನೀಡುವ ರೂ. 2 ಲಕ್ಷದ ಸಾಮಾನ್ಯ ಆರೋಗ್ಯ ವಿಮಾ (ವರ್ಷಕ್ಕೆ ರೂ. 4,800 – 40 ವರ್ಷದೊಳಗಿನವರಿಗೆ) ಜೊತೆಗೆ ಈ ಯೋಜನೆಯನ್ನು ಒಟ್ಟು ರೂ. 5,556ರ ಪ್ಲ್ಯಾನ್ನಲ್ಲಿ ಪಡೆದುಕೊಂಡರೆ, ರೂ. 17 ಲಕ್ಷದ ವಿಮಾ ನಿಮ್ಮದಾಗುತ್ತದೆ.
ಸಾಮಾನ್ಯ ಆರೋಗ್ಯ ವಿಮೆಯ ಪ್ರೀಮಿಯಂ ದರಗಳು (₹1 ಲಕ್ಷ ಮತ್ತು ₹2 ಲಕ್ಷ):
ಇಲ್ಲಿದೆ ಯೋಜನೆ ಸದುಪಯೋಗಳು:

ಭಾರತ ಸರ್ಕಾರದ ಅಂಚೆ ಇಲಾಖೆಯು BAJAJ Allianz ಮತ್ತು ಆದಿತ್ಯ ಬಿರ್ಲಾ ಪಾಲುದಾರಿಕೆಯೊಂದಿಗೆ ಈ ಯೋಜನೆ ನೀಡುತ್ತಿದೆ.
- ಕಡಿಮೆ ಆದಾಯದ ಜನರಿಗೆ ಸಂಕಷ್ಟ: ಒಂದು ಆಘಾತಕಾರಿ ವೈದ್ಯಕೀಯ ಸಮಸ್ಯೆ ಸಂಪೂರ್ಣ ಜೀವನ ಶೈಲಿಯನ್ನು ಬದಲಾಯಿಸಬಹುದು.
- ವೆಚ್ಚದ ಆಸ್ಪತ್ರೆ ಚಿಕಿತ್ಸೆಗಳು: ದೈನಂದಿನ ಚಿಕಿತ್ಸೆ ವೆಚ್ಚವೇ ಲಕ್ಷಾಂತರ ರೂ.
- ಆರ್ಥಿಕ ನೆಲೆಯ ರಕ್ಷಣೆಗೆ ಇನ್ಶೂರೆನ್ಸ್ ಅತ್ಯವಶ್ಯಕ: ಆರೋಗ್ಯ ವಿಮೆಯಿಲ್ಲದಿದ್ದರೆ ಆಸ್ಪತ್ರೆ ಬಿಲ್ಗಿಂತ ಸಾಲದ ಲೆಕ್ಕವೇ ಹೆಚ್ಚಾಗುತ್ತದೆ. ಈ ಯೋಜನೆಯನ್ನು ಅಂಚೆಯಣ್ಣ ಮೂಲಕ ಮಾತ್ರ ಮಾಡಲು ಸಾಧ್ಯ ಇದೆ. ನಿಮ್ಮ ಸಮೀಪದ ಪೋಸ್ಟ್ ಮ್ಯಾನ್ ಅವರ ಬಳಿ ಈ ಹೆಲ್ತ್ ಇನ್ಶೂರೆನ್ಸ್ ಪಡೆದುಕೊಳ್ಳಬಹುದು.
- ಆರ್ಥಿಕ ಭದ್ರತೆ ಸಾಮಾನ್ಯ ಜನರಿಗೆ:ವಾರ್ಷಿಕ ಪ್ರೀಮಿಯಂ 756 ರೂ.ಗೆ ರೂ. 15 ಲಕ್ಷದ ವಿಮೆ, ಎಲ್ಲ ವರ್ಗದ ಜನರಿಗೆ ಸೂಕ್ತವಾಗಿದೆ. ಇದನ್ನು ಖಾಸಗಿ ಕಂಪನಿಗಳಲ್ಲಿ ಪಡೆಯುವುದು ಅಸಾಧ್ಯ.
- ಗಂಭೀರ ರೋಗಗಳಿಗೆ ಸಹಾಯ:ಕ್ಯಾನ್ಸರ್, ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್ಪ್ಲಾಂಟ್ ಮೊದಲಾದ ಗಂಭೀರ ರೋಗಗಳಿಗೆ ಈ ವಿಮಾ ಸಹಾಯಕಾರಿಯಾಗುತ್ತದೆ.
- ಗ್ರಾಮೀಣ ಜನತೆಗೆ ನೆರವು:ಗ್ರಾಮೀಣ ಪ್ರದೇಶದ ಹೆಚ್ಚಿನ ಜನರು ಖಾಸಗಿ ವಿಮಾ ಯೋಜನೆಗಳನ್ನು ಪಡೆಯದೇ ಇರುತ್ತಾರೆ. ಈ ಯೋಜನೆ ಅಂಚೆ ಕಚೇರಿಗಳ ಮೂಲಕ ನೇರವಾಗಿ ಲಭ್ಯವಿರುವ ಕಾರಣ, ಹತ್ತಿರದ ಪಟ್ಟಣದಲ್ಲಿಯೇ ಜನರು ಇದನ್ನು ಪಡೆಯಬಹುದು. ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮ್ಮ ಹತ್ತಿರದ ಅಂಚೆಕಚೇರಿಗೆ ಹೋಗಿ ಪಡೆಯಿರಿ. ಈ ಒಳ್ಳೆಯ ಯೋಜನೆಯನ್ನು ಮಿಸ್ ಮಾಡಿಕೊಳ್ಳಬೇಡಿ.















