ನವದೆಹಲಿ: ಅಮೆರಿಕವು ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುತ್ತಲೇ ಇದೆ. ಆದರೆ, ಅಕ್ರಮ ಪ್ರವೇಶ ಮತ್ತು ವೀಸಾಗಳ ದುರುಪಯೋಗವನ್ನು ಸಹಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.ರಾಯಭಾರ ಕಚೇರಿಯು ಎಕ್ಸ್ ಪೋಸ್ಟ್ ಮೂಲಕ ಈ ಬಗ್ಗೆ ಸಂಕ್ಷಿಪ್ತ ಹೇಳಿಕೆ ಹಂಚಿಕೊಂಡಿದೆ.
‘ಅಮೆರಿಕವು ದೇಶಕ್ಕೆ ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುತ್ತಲೇ ಇದೆ. ಅಕ್ರಮ ಪ್ರವೇಶ, ವೀಸಾಗಳ ದುರುಪಯೋಗ ಅಥವಾ ಅಮೆರಿಕ ಕಾನೂನಿನ ಉಲ್ಲಂಘನೆಯನ್ನು ನಾವು ಸಹಿಸಲು ಸಾಧ್ಯವಿಲ್ಲ. ಅಂತಹರಿಗೆ ಅಮೆರಿಕ ಪ್ರವೇಶಿಸುವ ಯಾವುದೇ ಹಕ್ಕು ಇರುವುದಿಲ್ಲ’ ಎಂದು ಅದು ಹೇಳಿದೆ.
ಅಮೆರಿಕದ ನ್ಯೂವಾರ್ಕ್ ಲಿಬರ್ಟಿ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಕೈಕೋಳ ಹಾಕಿ ನೆಲದ ಮೇಲೆ ಉರುಳಿಸಿರುವ ವಿಡಿಯೊ ಮತ್ತು ಚಿತ್ರಗಳು ಹರಿದಾಡುತ್ತಿದೆ. ಈ ಕುರಿತಂತೆ ಭಾರತೀಯರು ಆಕ್ಷೇಪ ವ್ಯಕ್ತಪಡಿದುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ರಾಯಭಾರ ಕಚೇರಿ ಈ ಸ್ಪಷ್ಟನೆ ನೀಡಿದೆ.












