ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದಿಂದ ಎನರ್ಜಿ ಡ್ರಿಂಕ್ಸ್ ವಿತರಣೆ

ಉಡುಪಿ ಜುಲೈ 16:  ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕವು ಕಳೆದ ಲಾಕ್ ಡೌನ್ ಸಮಯದಲ್ಲಿ 20ನೇ ಮಾರ್ಚ್ ತಿಂಗಳಿAದ  ಇಂದಿನವರೆಗೆ  ಇಡೀ ಜಿಲ್ಲೆಯಾದ್ಯಂತ ಸಂಚರಿಸಿ 7 ತಾಲೂಕುಗಳ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ 30000 ಕ್ಕೂ ಮಿಕ್ಕಿ ಮಾಸ್ಕ್, ಡೆಟಲ್ ಸೋಪ್, ಸ್ಯಾನಿಟೈಸರ್‌ಗಳನ್ನು ವಲಸೆ ಕಾರ್ಮಿಕರಿಗೆ ನೀಡಲಾಗಿರುತ್ತದೆ.

ಮಾತ್ರವಲ್ಲದೆ 2 ಕಿಯೋಸ್ಕ್ ಮೆಶಿನ್‌ಗಳನ್ನು, ಪಿಪಿ.ಇ. ಕಿಟ್ ಮತ್ತು ಗ್ಲಾವ್ಸ್ಗಳನ್ನು ಶಿರ್ವ ಮತ್ತು ಬ್ರಹ್ಮಾವರÀ ಸಮುದಾಯ ಕೇಂದ್ರಗಳಿಗೆ ಹಸ್ತಾಂತರಿಸಿದೆ.

ಬುಧವಾರ 600 ಎನರ್ಜಿ ಡ್ರಿಂಕ್ಸ್ (ಜ್ಯೂಸ್ ಪ್ಯಾಕ) ಗಳನ್ನು ಕ್ಯಾರಂಟೈನ್‌ನಲ್ಲಿ ನೆಲೆಸಿರುವವರಿಗೆ, ಆಶಾ ಕಾರ್ಯಕರ್ತೆಯರು, ಫೈಮರಿ ಹೆಲ್ತ್ ಸೆಂಟರಿಗೆ ನೀಡಲು  ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮತ್ತು ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ ರವರು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾರವರಿಗೆ ಹಸ್ತಾಂತರಿಸಿದರು.

ಕೊವಿಡ್ 19 ಸಂದರ್ಭದಲ್ಲಿಯೂ ಜೀವದ ಹಂಗು ತೊರೆದು ರೆಡ್ ಕ್ರಾಸ್ ಸಂಸ್ಥೆಯು ತಮ್ಮ ಇಲಾಖೆಗೆ ಮಾಡುತ್ತಿರುವ ಸಮಾಜಮುಖಿ ಸೇವೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ಶ್ಲಾಘನೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಅಡಳಿತ ಮಂಡಳಿ ಸದಸ್ಯರಾದ ಡಾ. ಕೆ.ಕೆ. ಕಲ್ಕೂರ,   ವಿ.ಜಿ. ಶೆಟ್ಟಿ, ಪೋಷಕ ಸದಸ್ಯರಾದ ಮಹಮ್ಮದ್ ಮೌಲ, ಡಿಡಿಆರ್‌ಸಿ ಸಿಬ್ಬಂದಿಗಳು ಮತ್ತು ರೆಡ್ ಕ್ರಾಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಲ್ಲದೆ  ಉಡುಪಿ ಜಿಲ್ಲಾ ಆಸ್ವತ್ರೆ, ನಿಟ್ಟೂರಿನ ರಾಜ್ಯ ಮಹಿಳಾ ನಿಲಯ ಮತ್ತು ಬಾಲಕಿಯರ ಬಾಲ ಮಂದಿರಕ್ಕೆ 263 ಎನರ್ಜಿ ಡ್ರಿಂಕ್ಸ್ಗಳನ್ನು ಹಸ್ತಾಂತರಿಸಲಾಯಿತು.