ಕೆನಡಾದಲ್ಲಿ ಭಾರತೀಯ ಮೂಲದ ಯುವಕ ಮೃತ್ಯು!

ಕೆನಡಾ: ಕೆನಡಾದಲ್ಲಿ ಗ್ಯಾಂಗ್ ವಾರ್’ಗೆ ಭಾರತೀಯ ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಮೃತನನ್ನು ಭಾರತೀಯ ಮೂಲದ ಯುವಕ, ವ್ಯಾಂಕೋವರ್ ನಿವಾಸಿ ದಿಲ್ರಾಜ್ ಸಿಂಗ್ ಗಿಲ್ (28) ಎಂದು ಗುರುತಿಸಲಾಗಿದೆ.

ಕೆನಡಾದ ಬರ್ನಾಬಿಯಲ್ಲಿ ಗುಂಡಿನ ದಾಳಿಯಾಗಿದ್ದು, ಇದು ಗ್ಯಾಂಗ್ ವಾರ್ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಜನವರಿ 22ರಂದು ಸಂಜೆ 5.30ರ ಸುಮಾರಿಗೆ ಕೆನಡಾ ವೇಯ 3700 ಬ್ಲಾಕ್ ಬಳಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಬರ್ನಾಬಿ ಆರ್‌ಸಿಎಂಪಿ ಅಧಿಕಾರಿಗಳು ವರದಿ ಮಾಡಿದ್ದಾರೆ. ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಿಲ್ ಗುರುತು ಪತ್ತೆ ಮಾಡಿದ್ದಾರೆ. ಆತನ ಪ್ರಾಣ ಉಳಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಘಟನೆಗೆ ಕಾರಣ ಏನು ಎಂದು ತಿಳಿಯಲು ತನಿಖೆ ನಡೆಸುತ್ತಿರವುದಾಗಿ ಬ್ರಿಟಿಷ್ ಕೊಲಂಬಿಯಾದ ಬರ್ನಾಬಿಯ ಪೊಲೀಸರು ತಿಳಿಸಿದ್ದಾರೆ.