ಉಡುಪಿ: ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇದರ ವತಿಯಿಂದ ವೈದ್ಯರ ದಿನಾಚರಣೆಯನ್ನು ಶುಕ್ರವಾರ ಉಡುಪಿ ಐಎಂಎ ಭವನದಲ್ಲಿ ಜರಗಿತು.
ಮುಖ್ಯ ಅತಿಥಿ ಯಾಗಿ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಷನ್ ಇದರ ಉಪಕುಲಪತಿ ಲೇ .ಜ . ಡಾ ಎಂ. ಡಿ. ವೆಂಕಟೇಶ್ ಭಾಗವಹಿಸಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ ಹರಿಶ್ಚಂದ್ರ ಆಚಾರ್ಯ, ಡಾ ಆರ್ . ಎನ್ . ಭಟ್, ಡಾ. ಶ್ರೀಮತಿ ರಮಾ ವಿ. ಶೆಟ್ಟಿ ಇವರನ್ನು ಗೌರವಿಸಲಾಯತು. ಈ ಸಂದರ್ಭದಲ್ಲಿ ಹಲವಾರು ವೈದ್ಯರು ಉಪಸ್ಥಿತರಿದ್ದರು.
ಐಎಂಎ ಅಧ್ಯಕ್ಷ ಡಾ. ಕಲ್ಯಾ ವಿನಾಯಕ್ ಶೆಣೈ ಸ್ವಾಗತಿಸಿದರು. ಡಾ ಸಂದೀಪ್ ಶೆಣೈ ಸನ್ಮಾನಿತರನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ಡಾ. ಗಣಪತಿ ಹೆಗ್ಡೆ ವರದಿ ಮಂಡಿಸಿದರು. ಕೋಶಾಧಿಕಾರಿ ಡಾ. ಶರತ್ಚಂದ್ರ ರಾವ್ ವಂದಿಸಿದರು. ಡಾ.ರಾಜಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.