ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಇಂಡಿಯನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೋ ಅವರಿಗೆ ಭಾನುವಾರ ಉಡುಪಿ ಮಳಿಗೆಯಲ್ಲಿ ಅಭಿನಂದಿಸಲಾಯಿತು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಸಮಾಜ ಸೇವಕರಾದ ಲೀಲಾಧರ್ ಶೆಟ್ಟಿ ಮಜೂರು,ಹಾಸ್ಯ ಭಾಷಣಕಾರ್ತಿ ಸಂಧ್ಯಾ ಪೈ ಅವರು ನಿಹಾಲ್ ತಾವ್ರೋ ಗೆ ಶಾಲು ಹೊದಿಸಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಸಂಧ್ಯಾ ಪೈ ನಿಹಾಲ್ ತನ್ನ ಪ್ರತಿಭೆಯಿಂದ ಇಂದು ದೇಶದಲ್ಲಿಯೇ ಒರ್ವ ಉತ್ತಮ ಗಾಯಕರಾಗಿ ಹೆಸರುವಾಸಿಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಇವರ ಈ ಸಾಧನೆಗೆ ಅವರ ಕಠಿಣ ಪರಿಶ್ರಮ ಅಡಗಿರುವುದು ಕೂಡ ಅಷ್ಟೇ ಸತ್ಯ. ಅವರ ಸಾಧನೆ ಇತರ ಯುವಜನರಿಗೆ ಪ್ರೇರಣೆಯಾಗಲಿ. ನಿಹಾಲ್ ಗಾಯನ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಈ ವೇಳೆ ನಿಹಾಲ್ ತಾವ್ರೋ ರವರ ಪೋಷಕರು,ನಸೀರ್ ಅಹ್ಮದ್ ಕಾಪು,ಫಾರೂಕ್ ಚಂದ್ರನಗರ,ದಿವಾಕರ್ ಶೆಟ್ಟಿ,ರಾಘವೇಂದ್ರ ನಾಯಕ್,ಪುರಂದರ ತಿಂಗಲಾಯ,ತಂಝೀಮ್ ಶಿರ್ವ,ಸಿಬ್ಬಂದಿ ವರ್ಗ ಹಾಗೂ ನಿಹಾರ್ ತಾವ್ರೋ ರವರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.