ಲಡಾಕ್: ಬಾನೆತ್ತರದ ಗಿರಿ ಶಿಖರದ ಮೇಲೆ, ಆಳವಾದ ಸಮುದ್ರ, ಕೊರಕಲು ಭೂಪ್ರದೇಶ, ದೊಡ್ಡ ಬಂಡೆಕಲ್ಲಿರಲಿ ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ; ರಸ್ತೆ, ಸೇತುವೆ, ರೈಲ್ವೆ ಲೈನ್ ಹೀಗೆ ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ.
ಭಾರತೀಯ ಸೇನೆಯು ಲಡಾಖ್ನಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದೆ. ಸೇತುವೆಯು ಭಾರತೀಯ ಸೇನೆಯ ಪ್ರಭಾವಶಾಲಿ ಎಂಜಿನಿಯರಿಂಗ್ ಕೌಶಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸುತ್ತಿದೆ. ಸಪ್ತ ಶಕ್ತಿ ಇಂಜಿನಿಯರ್ ಗಳು ನಿರ್ಮಾಣ ಮಾಡಿರುವ ಈ ಸೇತುವೆ ಇಂಜಿನಿಯರಿಂಗ್ ಲೋಕದ ಅದ್ಭುತವೆನಿಸಿದೆ.
“ಸೇತುವೆ ಸವಾಲುಗಳು – ಯಾವುದೇ ಭೂಪ್ರದೇಶ ಅಥವಾ ಎತ್ತರ ದುಸ್ತರವಲ್ಲ” ಎಂಬ ಶೀರ್ಷಿಕೆಯಡಿ ಭಾರತೀಯ ಸೇನೆಯ ನೈಋತ್ಯ ಕಮಾಂಡ್ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಪೂರ್ವ ಲಡಾಖ್ನಲ್ಲಿರುವ ಸಪ್ತ ಶಕ್ತಿ ಇಂಜಿನಿಯರ್ಗಳು ಚಲನಶೀಲತೆ ಕಾರ್ಯಗಳು ಮತ್ತು ತರಬೇತಿಯನ್ನು ನಿರ್ವಹಿಸುತ್ತಿದ್ದಾರೆ.ಯುದ್ಧ ಮತ್ತು ಸಾಮಾಗ್ರಿಗಳ ಸರಬರಾಜನ್ನು ಸಕ್ರಿಯಗೊಳಿಸಲು ಪ್ರಬಲವಾದ ಸಿಂಧೂ ನದಿಗೆ ಸೇತುವೆ ಕಟ್ಟಲಾಗಿದೆ ಎಂದು ಸೇನೆ ಹೇಳಿದೆ.
'Bridging Challenges – No Terrain nor Altitude Insurmoutable’#SaptaShaktiEngineers in #EasternLadakh carrying out mobility tasks and training. Bridging the mighty #Indus River, enabling movement of both combat and logistic echelons.#SarvadaAgraniBde#IndianArmy@adgpi pic.twitter.com/7JxiNmhVlm
— SouthWesternCommand_IA (@SWComd_IA) September 11, 2022
ಭಾರವಾದ ಲೋಹದ ಭಾಗಗಳನ್ನು ನೀರಿಗೆ ಹಾಕಿ ಅದರ ಮೇಲೆ ಭಾರತೀಯ ಸೇನೆಯ ವಾಹನಗಳು ಈ ದಡದಿಂದ ಆ ದಡಕ್ಕೆ ಸರಾಗವಾಗಿ ಚಲಿಸುವುದನ್ನು ತೋರಿಸಲಾಗಿದೆ. ಈ ಸೇತುವೆಯು ದೇಶದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಿದೆ.