ನವದೆಹಲಿ: ಸುಡಾನ್‌ನ ಸೇನೆ ಮತ್ತು ಅರೆಸೇನಾಪಡೆಯು ಅಧಿಕಾರಕ್ಕಾಗಿ ಹಿಂಸಾಚಾರದಲ್ಲಿ ತೊಡಗಿದ್ದು, ಇದು 400 ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿದೆ. ಹಿಂಸಾಚಾರ ಸಂತ್ರಸ್ತ ಸುಡಾನ್ ನಲ್ಲಿ ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳ ನಾಗರಿಕರು ಸಿಲುಕಿದ್ದು, ಸುಡಾನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ರಕ್ಷಿಸಲು ಭಾರತವು “ಆಪರೇಷನ್ ಕಾವೇರಿ” ಅನ್ನು ಪ್ರಾರಂಭಿಸಿತು.
ಶುಕ್ರವಾರ, ಸುಡಾನ್ ನಲ್ಲಿ ಸಿಕ್ಕಿಬಿದ್ದ 135 ಭಾರತೀಯರನ್ನು ಹೊತ್ತ ಸಿ-130ಜೆ ವಿಮಾನದ ಎರಡನೇ ಬ್ಯಾಚ್ ಬಿಕ್ಕಟ್ಟಿನ ರಾಷ್ಟ್ರದಿಂದ ನಿರ್ಗಮಿಸಿದೆ.
#OperationKaveri#ModiHainToMumkinHain
Salute to our brave officers of @IAF_MCC 👇
Unlit runway, degraded airstrip: A daring midnight rescue operation by IAF in Sudan. Evacuees included Medical emergency, pregnant ladies, and many more. pic.twitter.com/Vt4MmzfnwE
— Oxomiya Jiyori 🇮🇳 (@SouleFacts) April 29, 2023
135 ಪ್ರಯಾಣಿಕರೊಂದಿಗೆ ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಐ.ಎ.ಎಫ್ ಸಿ-130ಜೆ ಟೇಕ್ ಆಫ್ ಆಗಿದೆ. ಇದು ಆಪರೇಷನ್ ಕಾವೇರಿ ಅಡಿಯಲ್ಲಿ ಸಿಕ್ಕಿಬಿದ್ದಿದ್ದ ಭಾರತೀಯರ 12 ನೇ ಬ್ಯಾಚ್ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸುಡಾನ್ ಅತ್ಯಾಧಿಕ ಹಿಂದುಳಿದ ದೇಶವಾಗಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಸುಡಾನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ಅಕ್ಷರಶ ಸಿನೀಮೀಯ ರೀತಿಯಲ್ಲಿ ಭಾರತೀಯ ವಾಯುಸೇನೆಯು ರಕ್ಷಿಸಿದೆ. ಐ.ಎ.ಎಫ್ ನ ಹೆವಿ-ಲಿಫ್ಟ್ ವಿಮಾನಗಳನ್ನು ಇಳಿಸಲು ಬೇಕಾದ ಯಾವ ಸೌಲಭ್ಯವೂ ವಿಮಾನ ನಿಲ್ದಾಣದಲ್ಲಿರಲಿಲ್ಲ. ಕಾರ್ಗತ್ತಲೆಯ ನಡುವಿನಲ್ಲಿ, ಸರಿಯಾದ ಏರ್ ಸ್ಟ್ರಿಪ್ ಕೂಡಾ ಇರದ ಜಾಗದಲ್ಲಿ ನೈಟ್ ವಿಶನ್ ಗಾಗಲ್ ಗಳನ್ನು ಬಳಸಿ ಭಾರತೀಯ ವಾಯುಸೇನೆಯು ಭಾರತೀಯರನ್ನು ರಕ್ಷಿಸಿದೆ.
ಏರ್‌ಸ್ಟ್ರಿಪ್ ಹಿಂಸಾತ್ಮಕವಾಗಿ ಪ್ರಕ್ಷುಬ್ಧವಾಗಿರುವ ಸುಡಾನ್ ರಾಜಧಾನಿ ಖಾರ್ಟೂಮ್‌ನಿಂದ ಉತ್ತರಕ್ಕೆ 40 ಕಿಮೀ ದೂರದಲ್ಲಿದೆ. ಏರ್‌ಸ್ಟ್ರಿಪ್‌ನ ಮೇಲ್ಮೈ ಹದಗೆಟ್ಟಿದ್ದು, ಯಾವುದೇ ಇಂಧನ ಅಥವಾ ನ್ಯಾವಿಗೇಷನಲ್ ಸಹಾಯ ಇರಲಿಲ್ಲ. ಮತ್ತು ಮುಖ್ಯವಾಗಿ, ಯಾವುದೇ ಲ್ಯಾಂಡಿಂಗ್ ದೀಪಗಳು ಇರಲಿಲ್ಲ. ಆದರೆ ಕೆಚ್ಚೆದೆಯ ಐ.ಎ.ಎಫ್ ಸಿಬ್ಬಂದಿಗಳು ಏರ್‌ಸ್ಟ್ರಿಪ್‌ನಲ್ಲಿ ಯಶಸ್ವಿಯಾಗಿ ಇಳಿಯಲು ಮತ್ತು ಜನರನ್ನು ರಕ್ಷಿಸಲು ನೈಟ್ ವಿಶನ್ ಗಾಗಲ್ಸ್ ಅಥವಾ ರಾತ್ರಿ ದೃಷ್ಟಿ ಕನ್ನಡಕಗಳನ್ನು ಬಳಸಿದ್ದಾರೆ.
ಏರ್‌ಸ್ಟ್ರಿಪ್ ಅನ್ನು ಸಮೀಪಿಸುತ್ತಿರುವಾಗ, ರನ್‌ವೇ ಯಾವುದೇ ಅಡೆತಡೆಗಳಿಂದ ಮುಕ್ತವಾಗಿದೆ ಮತ್ತು ಯಾವುದೇ ಶತ್ರು ಶಕ್ತಿಗಳು ಸಮೀಪದಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಲು ಏರ್‌ಕ್ರೂ ತಮ್ಮ ಎಲೆಕ್ಟ್ರೋ-ಆಪ್ಟಿಕಲ್/ಇನ್‌ಫ್ರಾ-ರೆಡ್ ಸಂವೇದಕಗಳನ್ನು ಬಳಸಿದರು. ರಕ್ಷಣಾ ಮೂಲಗಳ ಪ್ರಕಾರ, ಗ್ರೂಪ್ ಕ್ಯಾಪ್ಟನ್ ರವಿ ನಂದಾ ಅವರು ಭಾರತೀಯ ವಾಯುಪಡೆಯ C-130J ವಿಶೇಷ ಕಾರ್ಯಾಚರಣೆಯ ವಿಮಾನದ ಕ್ಯಾಪ್ಟನ್ ಆಗಿದ್ದು, ಧೈರ್ಯಶಾಲಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ಇದನ್ನು ಖಚಿತಪಡಿಸಿಕೊಂಡ ನಂತರ, ವಾಯುಪಡೆಯು ಪ್ರಾಯೋಗಿಕವಾಗಿ ಕಾರ್ಗತ್ತಲ ರಾತ್ರಿಯಲ್ಲಿ ನೈಟ್ ವಿಷನ್ ಗಾಗಲ್ಸ್‌ನಲ್ಲಿ ಯುದ್ಧತಂತ್ರದ ವಿಧಾನವನ್ನು ನಡೆಸಿದೆ ಎಂದು ಐಎಎಫ್ ವರದಿ ಮಾಡಿದೆ.
ಇದೊಂದು ಐತಿಹಾಸಿಕ ರಕ್ಷಣಾ ಕಾರ್ಯಾಚರಣೆ ಮತ್ತು ಇತಿಹಾಸದ ಪುಟಗಳಲ್ಲಿ ಭಾರತೀಯ ವಾಯುಸೇನೆಯ ಹೆಸರನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಹ ಸಾಹಸದ ಕಾರ್ಯವೆಂದು ಐ.ಎ.ಎಫ್ ಈ ಕಾರ್ಯಚರಣೆಯನ್ನು ಬಣ್ಣಿಸಿದೆ.
ಪೋರ್ಟ್ ಸುಡಾನ್‌ನಲ್ಲಿ ನೆಲೆಸಿರುವ 300 ಪ್ರಯಾಣಿಕರನ್ನು ಐಎನ್‌ಎಸ್ ಸುಮೇಧಾ ವಾಪಾಸು ಕರೆದುಕೊಂಡು ಬಂದಿದೆ. ಜೆಡ್ದಾಗಾಗಿ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವಿನ ಕಾದಾಟದಿಂದಾಗಿ ಸುಮಾರು 2,400 ಭಾರತೀಯರು ಸುಡಾನ್ ತೊರೆದಿದ್ದಾರೆ.