ಕ್ಯಾನಬೆರ್ರಾ: ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್ಗಳ ರೋಚಕ ಗೆಲುವು ಸಾಧಿಸಿತು.
ಪಂದ್ಯದ ಕೊನೆಯ ಓವರ್ನಲ್ಲಿ ಜಸ್ಪ್ರೀತ್ ಬೂಮ್ರಾ ಆ್ಯಡಮ್ ಜಂಪಾ ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು. ಅಬ್ಬರಿಸುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್ ವಿಕೆಟ್ ತೆಗೆದ ಬೂಮ್ರಾ ಪಂದ್ಯವನ್ನು ಟೀಂ ಇಂಡಿಯಾ ಕಡೆಗೆ ತಿರುಗಿಸಿದರು. ಅವರು 43 ರನ್ ನೀಡಿ ಎರಡು ಪ್ರಮುಖ ವಿಕೆಟ್ ಪಡೆದರು.
ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 289 ರನ್ ಗಳಿಸಿತು. ನಾಯಕ ಆ್ಯರನ್ ಫಿಂಚ್ 75 (82), ಗ್ಲೆನ್ ಮ್ಯಾಕ್ಸ್ವೆಲ್ 59 (38) ಭರ್ಜರಿ ಆಟ ಪ್ರದರ್ಶಿಸಿದರು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.