ಟೋಕಿಯೋ: ಜಪಾನ್‌ನಲ್ಲಿ ನಡೆದ 2023 ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ನಲ್ಲಿ ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸಿ ಭಾರತವು ಇದೇ ಮೊದಲ ಬಾರಿಗೆ ಕಪ್ ಗೆದ್ದುಕೊಂಡಿದೆ.
ಜಪಾನಿನ ಗಿಫು ಪ್ರಾಂತ್ಯದ ಕಕಮಿಗಹರಾದಲ್ಲಿ ನಡೆದ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ -2023 ರಲ್ಲಿ ತನ್ನ ಅಮೋಘ ಪ್ರದರ್ಶನವನ್ನು ತೋರಿದ ಭಾರತೀಯ ಕ್ರೀಡಾಳುಗಳು ಕಪ್ ಗೆದ್ದಿದ್ದಾರೆ. ಇದಕ್ಕಾಗಿ ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಹಾಕಿ ಇಂಡಿಯಾ ಪ್ರಕಟಿಸಿದೆ.












