ಗುರುವಾರ ಈಡನ್ ಗಾರ್ಡನ್ನಲ್ಲಿ ನಡೆದ 2023 ರ ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತದ ವಿರುದ್ಧ ಫೈನಲ್ ಪ್ರಶಸ್ತಿ ಹಣಾಹಣಿಗೆ ಸಿದ್ದವಾಗಿದೆ. ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ತಂಡವು 3 ವಿಕೆಟ್ ಮತ್ತು 2.4 ಓವರ್ಗಳು ಉಳಿದಿರುವಂತೆಯೇ 213 ರನ್ಗಳನ್ನು ಬೆನ್ನಟ್ಟುವ ಮೂಲಕ ರೋಮಾಂಚಕವಾಗಿ ಮೇಲುಗೈ ಸಾಧಿಸಿತು.
ಐದು ಬಾರಿ ಟೂರ್ನಿ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಇದು 8ನೇ ಏಕದಿನ ವಿಶ್ವಕಪ್. ಭಾರತವು ಎರಡು ಬಾರಿ ವಿಶ್ವ ಕಪ್ ಗೆದ್ದಿದ್ದು ಈ ಬಾರಿ ಇತಿಹಾಸವನ್ನು ಪುನರಾವರ್ತಿಸಲಿದೆಯೆ ಎನ್ನುವುದನ್ನು ಕಾದು ನೋಡಬೇಕಾಗಿದೆ.