ನವದೆಹಲಿ: ಈ ವರ್ಷದ ಅಕ್ಟೋಬರ್ ವೇಳೆಗೆ ದೇಶವು 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಸಂಪರ್ಕ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ವೇಗವಾಗಿ 5ಜಿ ಬಿಡುಗಡೆಗಾಗಿ ದೂರಸಂಪರ್ಕ ಮೂಲಸೌಕರ್ಯವನ್ನು ವೇಗವಾಗಿ ಮತ್ತು ಸುಲಭವಾಗಿ ನಿಯೋಜಿಸಲು ಅನುಕೂಲವಾಗುವಂತೆ ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ ನಿಯಮಗಳು, 2016 ಕ್ಕೆ ತಿದ್ದುಪಡಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಈ ಬಗ್ಗೆ ಹೇಳಿದರು.
ದೇಶಾದ್ಯಂತ 5ಜಿ ಸೇವೆಗಳ ವೇಗವನ್ನು ಖಚಿತಪಡಿಸಿಕೊಳ್ಳಲು ಸುಮಾರು 4 ಮೂಲಭೂತ ಅಂಶಗಳಾದ ಮುಖ್ಯವಾಗಿ ಸ್ಪೆಕ್ಟ್ರಮ್ ಹಂಚಿಕೆ, ಬಿಡುಗಡೆಯ ಅನುಮತಿಯ ಪ್ರಕ್ರಿಯೆಯಲ್ಲಿ ಸುಧಾರಣೆಗಳು, ಸಹಕಾರ ಸಂಯುಕ್ತ ವ್ಯವಸ್ಥೆ ಮತ್ತು ಸೇವೆಗಳ ಲಭ್ಯತೆಗಳಲ್ಲಿ ಸ್ಪೆಕ್ಟ್ರಮ್ ಹಂಚಿಕೆ ಮತ್ತು ಸಮನ್ವಯವು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಸಮಗ್ರ ರೀತಿಯಲ್ಲಿ ಮೂಲಸೌಕರ್ಯ ಸೇವೆಗಳ ಅಭಿವೃದ್ಧಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ವರ್ಷ ಮೇ ತಿಂಗಳಲ್ಲಿ ಗತಿಶಕ್ತಿ ಸಂಚಾರ ಪೋರ್ಟಲ್ ಅನ್ನು ದೂರಸಂಪರ್ಕ ಇಲಾಖೆಯು ಪ್ರಾರಂಭಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಐಟಿ ವ್ಯವಸ್ಥೆಗಳು ಮತ್ತು ರೈಲ್ವೆ, ಹೆದ್ದಾರಿಗಳಂತಹ ಪ್ರಮುಖ ಮೂಲಸೌಕರ್ಯ ಕೇಂದ್ರ ಸಚಿವಾಲಯಗಳನ್ನು ಪೋರ್ಟಲ್‌ನೊಂದಿಗೆ ಸಂಯೋಜಿಸಿ ಭಾರತವನ್ನು 5ಜಿ ಬಿಡುಗಡೆಗೆ ಸಿದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.