ನವದೆಹಲಿ: ಇಸ್ರೋ ಚಂದ್ರಯಾನ-3ರ ಸಾಫ್ಟ್ ಲ್ಯಾಂಡಿಂಗ್ ಕಾರ್ಯಾಚರಣೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ. ಇಂದು (ಬುಧವಾರ) ಸಂಜೆ 5.20ಕ್ಕೆ ನೇರ ಪ್ರಸಾರ ಪ್ರಾರಂಭವಾಗುತ್ತದೆ.ಶಾಲಾ-ಕಾಲೇಜುಗಳಲ್ಲಿ ಐತಿಹಾಸಿಕ ಕ್ಷಣದ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜ್ಞಾನಿಗಳು ಮತ್ತು ಶಿಕ್ಷಕರು ಕಾರ್ಯಾಚರಣೆಯ ಒಳನೋಟಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ನಡೆಯಲಿರುವ ಘಟನೆಯ ಮಹತ್ವವನ್ನು ವಿವರಿಸುತ್ತಾರೆ.ಇಂದು ಸಂಜೆ ಚಂದ್ರಯಾನ-3 ಲ್ಯಾಂಡರ್ ‘ಚಂದಮಾಮ’ನ ಸ್ಪರ್ಶಿಸಲಿರುವುದರಿಂದ ಭಾರತವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಜೀವನದ ಎಲ್ಲಾ ಹಂತಗಳನ್ನು ಮಿಗಿಲಾದ ದೊಡ್ಡ ಕ್ಷಣಕ್ಕಾಗಿ ಭಾರತೀಯರು ಜೋರಾದ ತಯಾರಿ ನಡೆಸುತ್ತಿದ್ದಾರೆ.ಲ್ಯಾಂಡರ್ ಚಂದ್ರನನ್ನು ಸಾಫ್ಟ್ ಆಗಿ ಸ್ಪರ್ಶಿಸುವ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಶಾಲೆ ಮತ್ತು ಕಾಲೇಜುಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ತಾರಾಲಯಗಳು ಚಂದ್ರನ ಕಾರ್ಯಾಚರಣೆ ವೀಕ್ಷಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
ದೇಶದ ಚಂದ್ರಯಾನ-3 ಮಿಷನ್ನ ಮೇಲೆ ನಿರೀಕ್ಷೆಗಳು ಗಗನಕ್ಕೇರಿವೆ. ಇಸ್ರೋದ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ನಿರ್ಧರಿಸಿರುವುದರಿಂದ ದೇಶಾದ್ಯಂತ ತಾರಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಿವಿಧ ಸಂಸ್ಥೆಗಳು ಇಂದು ದೊಡ್ಡ ಕ್ಷಣಕ್ಕಾಗಿ ತಯಾರಿ ನಡೆಸುತ್ತಿವೆ.
ಇದಲ್ಲದೇ, ಇಂದಿರಾ ಗಾಂಧಿ ತಾರಾಲಯವು ಚಂದ್ರಯಾನ-3 ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಪ್ಲಾನೆಟೋರಿಯಂ ಸಭಾಂಗಣದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಸಮಯದಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ತೊಡಗಿಸಿಕೊಳ್ಳಲು ಅವಕಾಶ ಒದಗಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಚಂದ್ರಯಾನ-3 ಕುರಿತು ಕಾರ್ಯಾಗಾರ: ದೆಹಲಿಯ ಇಂದಿರಾಗಾಂಧಿ ತಾರಾಲಯವು ಇಂದು ಕೌನ್ಸಿಲ್ ಆವರಣದಲ್ಲಿ ಚಂದ್ರಯಾನ-3 ಕುರಿತು ಕಾರ್ಯಾಗಾರವನ್ನು ಆಯೋಜಿಸಿದೆ. ಕೌನ್ಸಿಲ್ ಆವರಣದಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರದಲ್ಲಿ, ರಿಮೋಟ್ ಸೆನ್ಸಿಂಗ್ ಮತ್ತು ಅಪ್ಲಿಕೇಶನ್‌ಗಳ ಕೇಂದ್ರದ ವಿಜ್ಞಾನಿ ಡಾ.ಅನಿರುದ್ಧ್ ಉನಿಯಾಲ್ ಅವರು ಚಂದ್ರನ ಒಳನೋಟ ಹಾಗೂ ಸಂಯೋಜನೆ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ.
ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಮಾನವನ ಜಾಣ್ಮೆ ಹಾಗೂ ನಿರ್ಣಯಕ್ಕೆ ಸಾಕ್ಷಿ ಆಗಲಿದೆ. ಲ್ಯಾಂಡರ್ ‘ವಿಕ್ರಮ್’ ಮತ್ತು ‘ರೋವರ್ ಪ್ರಗ್ಯಾನ್’ ಒಳಗೊಂಡಿರುವ ಎಲ್ಎಂ, ಚಂದ್ರನ ಭೂಪ್ರದೇಶದಲ್ಲಿ ಅತ್ಯಂತ ಸುರಕ್ಷಿತವಾಗಿ ಹಗುರವಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಯುವ ಮೂಲಕ ನೂತನ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಇಂದು (ಬುಧವಾರ) ಸಂಜೆ 6.04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡ್ ಆಗಲಿದೆ.
ಲ್ಯಾಂಡಿಂಗ್ ಕಾರ್ಯಾಚರಣೆಯ ನೇರ ಪ್ರಸಾರ ಏಲ್ಲಿ ವೀಕ್ಷಿಸಬೇಕು?: ಲ್ಯಾಂಡಿಂಗ್ ಕಾರ್ಯಾಚರಣೆಗಳ ನೇರ ಪ್ರಸಾರವು ಬುಧವಾರ ಸಂಜೆ 5.20ಕ್ಕೆ ಪ್ರಾರಂಭವಾಗುತ್ತದೆ. 2023 ಆಗಸ್ಟ್ 5.27ರಿಂದ ಇಸ್ರೋ (ISRO) ವೆಬ್‌ಸೈಟ್, ಅದರ ಯೂಟ್ಯೂಬ್ ಚಾನೆಲ್, ಫೇಸ್ಬುಕ್ (Facebook) ಮತ್ತು ಸಾರ್ವಜನಿಕ ಪ್ರಸಾರಕ ಡಿಡಿ ನ್ಯಾಷನಲ್ ಟಿವಿಯಲ್ಲಿ ಲ್ಯಾಂಡಿಂಗ್‌ನ ನೇರಪ್ರಸಾರ ಲಭ್ಯವಿರುತ್ತದೆ. ಭಾರತವು ಈ ಸಾಧನೆ ಮಾಡಿದ ನಂತರ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ಚಂದ್ರನನ್ನು ತಲುಪಿವೆ. ಆದರೆ, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಏಕೈಕ ದೇಶ ಕೀರ್ತಿಗೆ ಪಾತ್ರವಾಗಿದೆ.