ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನ ಆರಂಭವಾಗಿರುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ ಸಂಘರ್ಷದ ಕುರಿತ ಭಾರತ ತನ್ನ ಹೇಳಿಕೆಯಲ್ಲಿ ಹೊಸ ವಾಕ್ಯ( ಮೊದಲಿನ ಕರಡಿನಲ್ಲಿ ಹೊಸ ವಾಕ್ಯವೊಂದನ್ನ) ಸೇರಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಜಿ20 ಶೃಂಗಸಭೆಯ ಕೊನೆಯಲ್ಲಿ ಜಂಟಿ ನಾಯಕರ ಘೋಷಣೆಗೆ ಉಕ್ರೇನ್ ಬಿಕ್ಕಟ್ಟು ವಿಷಯದಲ್ಲಿ ಭಾರತ ಹೊಸ ಹೇಳಿಕೆಯನ್ನು ಪ್ರಸ್ತಾಪಿಸಿದೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 3-6 ರವರೆಗೆ ನಡೆದ G20 ಶೆರ್ಪಾ ಸಭೆಯಲ್ಲಿ ಉಕ್ರೇನ್ ಸಂಘರ್ಷ ವಿವರಿಸಲು ವಾಕ್ಯದಲ್ಲಿ ಯಾವುದೇ ಒಮ್ಮತವಿಲ್ಲ ಎಂಬುವುದನ್ನು ಭಾರತ ಹೇಳಿತ್ತು. ಶನಿವಾರ ಬೆಳಗ್ಗೆ ಪ್ರಕಟವಾದ ಹೊಸ ವಾಕ್ಯದಲ್ಲಿ ಒಮ್ಮತವಿದೆ ಎಂದು ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೊಸ ವಾಕ್ಯ ಸೇರ್ಪಡೆ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಚೀನಾ ಮತ್ತು ರಷ್ಯಾದ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.
ಇಂದು ಬೆಳಗ್ಗೆ ಜಿ-20 ನಾಯಕರ ಶೃಂಗಸಭೆಯಲ್ಲಿ ನಡೆದ ‘ಒನ್ ಅರ್ಥ್’ (ಒಂದು ಭೂಮಿ) ಅಧಿವೇಶನವನ್ನು ಉದ್ದೇಶಿಸಿ ತಮ್ಮ ಆರಂಭಿಕ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ವಿಶ್ವವು ಕೋವಿಡ್ ಅನ್ನು ಸೋಲಿಸಲು ಸಾಧ್ಯವಾಗಿದ್ದರೆ, ಅದಕ್ಕೆ ಯುದ್ಧದಿಂದ ಉಂಟಾದ ನಂಬಿಕೆಯ ಕೊರತೆಯ ಮೇಲೂ ಜಯ ಸಾಧಿಸಬಹುದು ಎಂದು ಪರೋಕ್ಷವಾಗಿ ಉಕ್ರೇನ್ ಹಾಗೂ ರಷ್ಯಾ ಯುದ್ಧದ ಕುರಿತು ಹೇಳಿದ್ದರು.
ಅಧಿವೇಶನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಸೌದಿ ಅರೇಬಿಯಾ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಹಾಗೂ ಇತರ ಜಾಗತಿಕ ನಾಯಕರು ಉಪಸ್ಥಿತರಿದ್ದರು. ಮತ್ತೊಂದೆಡೆ, ಈ ವಾರ್ಷಿಕ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರಾಗಿದ್ದಾರೆ. ರಷ್ಯಾದಿಂದ ಪುಟಿನ್ ಬದಲಿಗೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹಾಗೂ ಚೀನಾದಿಂದ ಕ್ಸಿ ಬದಲಿಗೆ ಪ್ರೀಮಿಯರ್ ಲಿ ಕಿಯಾಂಗ್ ಪಾಲ್ಗೊಂಡಿದ್ದಾರೆ.
ಸಕಾರಾತ್ಮಕ ಫಲಿತಾಂಶದ ಪ್ರಯತ್ನದಲ್ಲಿ ಭೌಗೋಳಿಕ ರಾಜಕೀಯ ವಿಷಯದ ವಾಕ್ಯ ಇಲ್ಲದೇ ಸದಸ್ಯ ರಾಷ್ಟ್ರಗಳ ನಡುವೆ ಘೋಷಣೆಯ ಕರಡನ್ನು ಭಾರತ ಶುಕ್ರವಾರ ನೀಡಿತ್ತು. ಶೃಂಗಸಭೆಯ ಮೊದಲ ದಿನದಂದು ಜಿ20 ನಾಯಕರು ಜಾಗತಿಕ ಸವಾಲುಗಳ ಚರ್ಚೆಗಳನ್ನು ಪ್ರಾರಂಭಿಸಿದಾಗ ಉಕ್ರೇನ್ ಕುರಿತು ಭಾರತದ ಹೊಸ ವಾಕ್ಯವನ್ನು ಸೇರ್ಪಡೆ ಮಾಡಿದೆ.
ಉಕ್ರೇನ್ ಸಂಘರ್ಷವನ್ನು ಉಲ್ಲೇಖಿಸದೇ ಯಾವುದೇ ನಾಯಕರ ಘೋಷಣೆಯನ್ನು ಜಿ7 ರಾಷ್ಟ್ರಗಳು ಒಪ್ಪುವುದಿಲ್ಲ ಎಂದು ಚೀನಾ ಮತ್ತು ರಷ್ಯಾದ ಮೂಲಗಳು ಈ ಹಿಂದೆ ಹೇಳಿದ್ದವು. ಜಿ-20 ಒಮ್ಮತದ ತತ್ತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ದೃಷ್ಟಿಕೋನದ ಕೊರತೆಯು ಜಂಟಿ ಘೋಷಣೆಯಿಲ್ಲದೇ ಶೃಂಗಸಭೆಯು ಅಂತ್ಯಗೊಳ್ಳಬಹುದು ಎಂಬ ಆತಂಕ ಇತ್ತು ಎಂದು ವರದಿಯಾಗಿದೆ.












