ನವದೆಹಲಿ: ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಸಾಕಷ್ಟು ವೃದ್ಧಿಸಿಕೊಂಡಿದ್ದು, ಈಗ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಇಂದು ಜಮ್ಮು-ಕಾಶ್ಮೀರ ಸಂಬಂಧಿಸಿ ಆಯೋಜಿಸಿದ್ದ ಆನ್ ಲೈನ್ ರಾಲ್ಯಿಯಲ್ಲಿ ಮಾತನಾಡಿದ ಅವರು, ಭಾರತ ಗಡಿ ಭದ್ರತೆ, ರಾಷ್ಟ್ರೀಯ ಗೌರವದ ವಿಷಯದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಗಡಿ ವಿವಾದ ಕುರಿತ ಬೆಳವಣಿಗೆಯನ್ನು ಸರಿಯಾದ ಸಮಯದಲ್ಲಿ ಹಂಚಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಲಡಾಖ್ ನ ಪೂರ್ವಭಾಗದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಬಗ್ಗೆ ಪ್ರಸ್ತಾಪಿಸಿದ ಅವರು, ನಮ್ಮೊಂದಿನ ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಚೀನಾ ಹೇಳಿದೆ. ಭಾರತದ ನಿಲುವು ಕೂಡ ಇದೇ ಆಗಿದೆ ಎಂದರು.