ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ರಕ್ತದಾನ: ಹೊಸ ವಿಶ್ವ ದಾಖಲೆ ಸೃಷ್ಟಿಸಿದ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 72 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ರಕ್ತದಾನ ಅಮೃತ ಮಹೋತ್ಸವ’ ಕಾರ್ಯಕ್ರಮದ ಅಡಿಯಲ್ಲಿ ಭಾರತವು ನಿನ್ನೆ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ರಕ್ತದಾನಗಳ ಹೊಸ ವಿಶ್ವ ದಾಖಲೆಯನ್ನು ಬರೆದಿದೆ. ಇದು ದೇಶದಾದ್ಯಂತ ನಡೆದ ಅತಿ ದೊಡ್ಡ ರಕ್ತದಾನ ಅಭಿಯಾನವಾಗಿತ್ತು. ಶನಿವಾರದಂದು 6112 ಕ್ಕೂ ಹೆಚ್ಚು ಅನುಮೋದಿತ ಶಿಬಿರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುತ್ತಲಿದೆ.

ಈ ಅಭಿಯಾನವು ನಿಯಮಿತ ಸಂಭಾವನೆ ಪಡೆಯದ ಸ್ವಯಂಪ್ರೇರಿತ ರಕ್ತದಾನಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಮತ್ತು ರಕ್ತ ಅಥವಾ ಅದರ ಘಟಕಗಳು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಿದೆ ಎನ್ನುವ ಗುರಿಯನ್ನು ಹೊಂದಿದೆ. 2021 ರ ಅಂಕಿಅಂಶಗಳ ಪ್ರಕಾರ, ಭಾರತದ ವಾರ್ಷಿಕ ರಕ್ತದ ಅಗತ್ಯವು ಸುಮಾರು 1.5 ಕೋಟಿ ಘಟಕಗಳಾಗಿದ್ದು, ರಕ್ತದ ಕೊರತೆ ಭಾರತದಂತಹ ಅಗಾಧ ಜನಸಂಖ್ಯೆಯ ದೇಶವನ್ನು ಬಹುವಾಗಿ ಕಾಡುತ್ತಿದೆ.