ನವದೆಹಲಿ: 2029-30ರ ವೇಳೆಗೆ ಭಾರತವು ತನ್ನ ಮೊದಲ ಖಾಸಗಿಯಾಗಿ ನಿರ್ವಹಿಸಲ್ಪಡುವ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ (SPR) ಅನ್ನು ನಿರ್ಮಿಸಲು ಯೋಜಿಸಿದ್ದು, ಇದು ಭಾರತದಲ್ಲಿ ಶೇಖರಿಸಿದ ಎಲ್ಲಾ ತೈಲವನ್ನು ವ್ಯಾಪಾರ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನ ಮುಖ್ಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.
ಕೊರತೆಯ ಸಂದರ್ಭದಲ್ಲಿ ತೈಲದ ಮೊದಲ ಹಕ್ಕನ್ನು ಸರ್ಕಾರ ಹೊಂದಿರುತ್ತದೆ ಎಂದು ಐಎಸ್ಪಿಆರ್ಎಲ್ ಮುಖ್ಯ ಕಾರ್ಯನಿರ್ವಾಹಕ ಎಲ್.ಆರ್. ಜೈನ್ ಹೇಳಿದ್ದಾರೆ.
ಭಾರತವು ಎರಡು ಹೊಸ ಎಸ್ಪಿಆರ್ಗಳನ್ನು ನಿರ್ಮಿಸಲು ಯೋಜಿಸಿದೆ. ಮೊದಲನೆಯದು ಪಾದೂರಿನಲ್ಲಿ 18.3 ಮಿಲಿಯನ್ ಬ್ಯಾರೆಲ್ಗಳ ಭೂಗತ ತೈಲಾಗಾರ ಎರಡನೆಯದ್ದು ಪೂರ್ವ ಒಡಿಶಾ ರಾಜ್ಯದಲ್ಲಿ 29.3 ಮಿಲಿಯನ್ ಬ್ಯಾರೆಲ್ಗಳ ತೈಲಾಗಾರ. ಜೊತೆಗೆ ಖಾಸಗಿ ಪಾಲುದಾರರೊಂದಿಗೆ ಸ್ಥಳೀಯವಾಗಿ ತೈಲವನ್ನು ವ್ಯಾಪಾರ ಮಾಡಲು ಅನುಮತಿಸಲಾಗಿದೆ.
ಭಾರತದ ಎಸ್ಪಿಆರ್ಗಳನ್ನು ನಿರ್ವಹಿಸುವ ಐಎಸ್ಪಿಆರ್ಎಲ್ ಕಂಪನಿಯು ಕಳೆದ ತಿಂಗಳು ಪಾದೂರು ಎಸ್ಪಿಆರ್ಗಾಗಿ ಸ್ಥಳೀಯ ಮತ್ತು ಜಾಗತಿಕ ಕಂಪನಿಗಳ ಗಮನಸೆಳೆಯಲು ಟೆಂಡರ್ ನೀಡಿದೆ. ಸೆಪ್ಟೆಂಬರ್ ವೇಳೆಗೆ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಟೆಂಡರ್ ನೀಡಲು ನಾವು ಆಶಿಸುತ್ತೇವೆ ಮತ್ತು ಶೂನ್ಯ ಡೇಟಾದಿಂದ 60 ತಿಂಗಳಲ್ಲಿ ಎಸ್ಪಿಆರ್ ಪೂರ್ಣಗೊಳಿಸಬೇಕಾಗಿದೆ ಎಂದು ಜೈನ್ ಹೇಳಿದ್ದಾರೆ.
ಪಾದೂರು ಎಸ್ಪಿಆರ್ ನಿರ್ಮಾಣ ಮತ್ತು ಲಿಂಕ್ಡ್ ಪೈಪ್ಲೈನ್ ಮತ್ತು ತೈಲ ಆಮದು ಸೌಲಭ್ಯಕ್ಕೆ ಸುಮಾರು 55 ಶತಕೋಟಿ ರೂಪಾಯಿಗಳು ($659 ಮಿಲಿಯನ್) ವೆಚ್ಚವಾಗಲಿದೆ ಎಂದು ಐಎಸ್ಪಿಆರ್ಎಲ್ ಅಂದಾಜಿಸಿದೆ. ಕೇಂದ್ರ ಸರ್ಕಾರವು ಒಟ್ಟು ಮೌಲ್ಯದ 60 ಪ್ರತಿಶತದವರೆಗೆ ವೆಚ್ಚ ಭರಿಸುತ್ತದೆ.
ಇಲ್ಲಿಯವರೆಗೆ, ಭಾರತವು ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿರುವ ಮೂರು ಎಸ್ಪಿಆರ್ ಗಳಿಗೆ ಭಾಗಶಃ ವಾಣಿಜ್ಯೀಕರಣವನ್ನು ಮಾತ್ರ ಅನುಮತಿಸಿದೆ, ಇದು 36.7 ಮಿಲಿಯನ್ ಬ್ಯಾರೆಲ್ಗಳ ಒಟ್ಟು ಸಾಮರ್ಥ್ಯವನ್ನು ಹೊಂದಿದೆ.