ತ್ಯಾಗದಿಂದ ಬಂದ ತೇಜಸ್ಸು “ಸ್ವಾತಂತ್ರ್ಯ”: ಪ್ರಜ್ಞಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ಜ್ಞಾ ಆಚಾರ್ಯ

                           ತೃತೀಯ  ಬಿ.ಎ

                     ಪತ್ರಿಕೋದ್ಯಮ ವಿಭಾಗ                            

                     ಸರಕಾರಿ ಪ್ರಥಮ ದರ್ಜೆ     

                        ಕಾಲೇಜು ಕಾರ್ಕಳ
ಪ್ರಜ್ಞಾ ಆಚಾರ್ಯ
ತೃತೀಯ  ಬಿ.ಎ ಪತ್ರಿಕೋದ್ಯಮ ವಿಭಾಗ                            
ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ

 ನನ್ನ ಪ್ರಕಾರ ನಾವು ಸ್ವಾತಂತ್ರ್ಯ ದಿನವನ್ನು ತುಂಬಾ ಖುಷಿಯಿಂದ,  ಗೌರವದಿಂದ ಆಚರಿಸಬೇಕು. ನನ್ನ ಬಾಲ್ಯದ ದಿನದಲ್ಲಿ ಶಾಲೆಗೆ ಹೋಗುತ್ತಿರುವಾಗ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನದಂದು ಸುತ್ತಮುತ್ತಲೂ ಎಲ್ಲಾ ಸ್ವಚ್ಛಗೊಳಿಸಿ ಭಾರತದ ನಕ್ಷೆಯನ್ನು ಧ್ವಜಸ್ತಂಬದ ಮುಂದೆ ಬಿಡಿಸಿ ಅದಕ್ಕೆ ಹೂವಿನಿಂದ ಅಲಂಕರಿಸುತಿದ್ದೆವು. ಆ ಒಂದು ದಿನದ ಸಂಭ್ರಮ ಮರೆಯಲಾರದಷ್ಟು ಸ್ಮರಣೀಯ. ಹೊಸ ಸಮವಸ್ತ್ರಗಳನ್ನು ಧರಿಸಿ. ಕೇಸರಿ, ಬಿಳಿ, ಹಸಿರಿನ ಬಳೆಗಳು ಹಾಗೆ ಬಾವುಟಗಳನ್ನು ಖರೀದಿಸಿ, ಸ್ವಾತಂತ್ರ್ಯ ದಿನಾಚರಣೆಯಂದು ಸಂಭ್ರಮದಿಂದ ಶಾಲೆಗೆ ಹೋಗುತ್ತಿದ್ದೆವು. ನಂತರ  ಎಲ್ಲರೂ ಸರತಿ ಸಾಲಲ್ಲಿ ನಿಂತು ಧ್ವಜಾರೋಹಣ,ನಾಡಗೀತೆ,ಧ್ವಜ ಗೀತೆ ಹಾಡಿ ಗೌರವಿಸುತ್ತಿದ್ದೆವು. ನಂತರದಲ್ಲಿ ಸರತಿ ಸಾಲಿನೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಘೋಷ ವಾಕ್ಯಗಳನ್ನು ಕೂಗುತ್ತಾ ಮೆರವಣಿಗೆಯನ್ನು ಪ್ರಾರಂಭಿಸುತ್ತಿದ್ದೆವು. ಶಾಲೆಗೆ ಹಿಂತಿರುಗಿದ ನಂತರ ಎಲ್ಲರೂ ವಿಧವಿಧವಾದ ಸಿಹಿತಿಂಡಿಯನ್ನು ವಿತರಿಸುತ್ತಿದ್ದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.ಆ ನೆನಪುಗಳೆಲ್ಲಾ ಮಧುರ.

ದಿನ ಕಳೆದ ಹಾಗೆ ನಮಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವು ತಿಳಿಯುತ್ತ ಹೋಯಿತು. ನಾವು ಹಬ್ಬದ ಸಂಭ್ರಮದಲ್ಲಿ ಮಾತ್ರವಲ್ಲ ನಮ್ಮ ನಿತ್ಯ ಜೀವನದಲ್ಲೂ ದೇಶದ ಹಿತಕ್ಕಾಗಿ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸುವುದೇ ನಿಜವಾದ ಸ್ವಾತಂತ್ರ್ಯ ದಿನಾಚರಣೆ ಎಂಬುದು ನನ್ನ ಭಾವನೆ. ದೇಶಕ್ಕೆ ಎಷ್ಟು ಗೌರವ ಕೊಡುತ್ತೇವೋ ಅಷ್ಟೇ ಗೌರವ ಮರ್ಯಾದೆ ನಮ್ಮ ರಾಷ್ಟ್ರದ ಧ್ವಜದ ಮೇಲೆಯೂ ಇರಬೇಕು ರಾಷ್ಟ್ರಧ್ವಜವನ್ನು ಸ್ವತಂತ್ರ ದಿನಾಚರಣೆಗೆ ಮಾತ್ರ ಸೀಮಿತವಾಗಿಡದೆ ಅದನ್ನು ನಮ್ಮ ಜೀವನದುದ್ದಕ್ಕೂ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.