ಮಂಗಳೂರು: ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಭಾರತದ 77 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ರಾಷ್ಟ್ರವ್ಯಾಪಿ ಉಪಕ್ರಮಗಳೊಂದಿಗೆ ಆಚರಿಸಿತು.

ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ಮಾತನಾಡಿ, ನಾವು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಬ್ಯಾಂಕ್ ಆಫ್ ಬರೋಡಾ, ರಾಷ್ಟದ ಪ್ರತಿ ತನ್ನ ಬದ್ಧತೆಯನ್ನು ಪುನರುಚ್ಚರಿಸಿ, ದೇಶದ ಆರ್ಥಿಕ, ಸಾಮಾಜಿಕ ಮತ್ತು ಡಿಜಿಟಲ್ ಇಂಡಿಯಾವನ್ನು ಬೆಂಬಲಿಸುವ ಒಂದು ದೃಢವಾದ ಪಾಲುದಾರನಾಗಿದೆ. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಿದ್ದೇವೆ ಎಂದರು.

ಬ್ಯಾಂಕ್ ತನ್ನ ಮುಂಬೈನಲ್ಲಿರುವ ಕಾರ್ಪೊರೇಟ್ ಕಚೇರಿಯಲ್ಲಿ ಮತ್ತು ದೇಶಾದ್ಯಂತದ ಕಚೇರಿಗಳಲ್ಲಿ ಧ್ವಜಾರೋಹಣ ಸಮಾರಂಭವನ್ನು ಆಯೋಜಿಸಿತು. ಬ್ಯಾಂಕ್ ಮತ್ತು ಅದರ ಉದ್ಯೋಗಿಗಳು ಹರ್ ಘರ್ ತಿರಂಗಾ ಅಭಿಯಾನವನ್ನು ಅನುಮೋದಿಸಿದರು.

ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತದ 70 ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗಳನ್ನು ಸ್ಥಾಪಿಸುವ ಮೂಲಕ ಆಗಸ್ಟ್ 14 ಅನ್ನು ‘ವಿಭಜನೆಯ ಕರಾಳ ನೆನಪಿನ ದಿನ’ ಎಂದು ಗುರುತಿಸಿತು. ಪ್ರದರ್ಶನವು ಭಾರತದ ವಿಭಜನೆಯ ಕಥೆಯನ್ನು ವಿವರಿಸುತ್ತದೆ, ವಿಭಜನೆಯ ಸಮಯದಲ್ಲಿ ನಾಗರಿಕರು ಅನುಭವಿಸಿದ ನೋವನ್ನು ಗುರುತಿಸುತ್ತದೆ. ಪ್ರದರ್ಶನಗಳನ್ನು ಉದ್ಘಾಟಿಸಲು ಬ್ಯಾಂಕ್ ಪ್ರಮುಖ ಸ್ಥಳೀಯ ಗಣ್ಯರನ್ನು ಆಹ್ವಾನಿಸಿತು.

‘ಮೇರಿ ಮಾಟಿ ಮೇರಾ ದೇಶ್’ ಉಪಕ್ರಮದ ಭಾಗವಾಗಿ, ಬ್ಯಾಂಕ್ ಆಫ್ ಬರೋಡಾ ನೌಕರರು ಕೈಹಿಡಿಯಲ್ಲಿ ಮಣ್ಣಿನೊಂದಿಗೆ ಪಂಚಪ್ರಾಣ ಪ್ರತಿಜ್ಞೆಯನ್ನು ತೆಗೆದುಕೊಂಡರು. ತಮ್ಮ ನಿಷ್ಠೆ, ಸಮರ್ಪಣೆ ಮತ್ತು ರಾಷ್ಟ್ರ ಗೌರವವನ್ನು ಪ್ರದರ್ಶಿಸಿದರು.

ಬ್ಯಾಂಕ್ ಆಫ್ ಬರೋಡಾ, ಮಂಗಳೂರು ವಲಯವು ಮಡಿಕೇರಿಯಿಂದ ಗುಲ್ಬರ್ಗದವರೆಗೆ 22 ಜಿಲ್ಲೆಗಳಲ್ಲಿ ಒಟ್ಟು 383 ಶಾಖೆಗಳನ್ನು ಹೊಂದಿದ್ದು ಪ್ರಧಾನ ವ್ಯವಸ್ಥಾಪಕಿ ಹಾಗೂ ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಮಂಗಳೂರಿನ ವಿಜಯ ಟವರ್ಸ್ನಲ್ಲಿರುವ ಬ್ಯಾಂಕ್‌ನ ವಲಯ ಕಚೇರಿ ಆವರಣದಲ್ಲಿ ಸ್ವಾತಂತ್ರ‍್ಯ ದಿನವನ್ನು ಆಚರಿಸಿದರು.

ಮಂಗಳೂರು ವಲಯದ ಡಿಜಿಎಂ ಹಾಗೂ ಉಪವಲಯ ಮುಖ್ಯಸ್ಥ ರಮೇಶ್ ಕಾನಡೆ
ಧ್ವಜಾರೋಹಣ ನೆರವೇರಿಸಿದರು.

ಅಶ್ವಿನಿ ಕುಮಾರ್, ಡಿಜಿಎಂ- ನೆಟ್‌ವರ್ಕ್ ಮತ್ತು ಎಂ.ವಿ.ಎಸ್. ಪ್ರಸಾದ್, ಮಂಗಳೂರು ನಗರ
ಪ್ರಾದೇಶಿಕ ವ್ಯವಸ್ಥಾಪಕರು, ಮಂಗಳೂರಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನದ ಅಂಗವಾಗಿ ಭಾರತ ಸರ್ಕಾರದ ನಿರ್ದೇಶನದಂತೆ ಪಂಚ ಪ್ರಾಣ ಪ್ರತಿಜ್ಞೆಯನ್ನು ನೆರವೇರಿಸಲಾಯಿತು ಮತ್ತು ಸಸಿಗಳನ್ನು ವಿತರಿಸಲಾಯಿತು.