ಉಡುಪಿ,ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾವಿದ್ಯಾಲಯವು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ
ತಾಂತ್ರಿಕ ಉನ್ನತೀಕರಣ ಮಂಡಳಿ, ಕರ್ನಾಟಕ ತಾಂತ್ರಿಕ ಸಲಹಾ
ಸೇವೆಗಳ ಸಂಸ್ಥೆ ಮತ್ತು ಭಾರತ ಸರಕಾರದ ಯೋಜನೆಯಡಿಯಲ್ಲಿ ಒಂದು ದಿನದ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 02 ಡಿಸೆಂಬರ್ 2025 ರಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಡಾ. ಸಚಿನ್ ಭಟ್, ಡೀನ್ (ಸಂಶೋಧನೆ)
ಮತ್ತು ಡಾ. ಸುದರ್ಶನ್ ರಾವ್, ಡೀನ್ (ಶೈಕ್ಷಣಿಕ) ಇವರು
ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕೈಗಾರಿಕಾ
ಕೇಂದ್ರದ ಉಪನಿರ್ದೇಶಕರಾದ ಶ್ರೀ ಸೀತಾರಾಮ್ ಶೆಟ್ಟಿ ಇವರು
ವಹಿಸಿದ್ದರು. ಇವರು ಮಾತನಾಡಿ ಉದಯೋನ್ಮುಖ ಉದ್ಯಮಿಗಳಿಗೆ
ಲಭ್ಯವಿರುವ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು
ನೀಡಿದರು. ವಿದ್ಯಾರ್ಥಿಗಳನ್ನು ಉದ್ಯಮಿಗಳಾಗಿ ಪರಿವರ್ತಿಸಲುಬೇಕಾದ
ಮಾರ್ಗದರ್ಶನದ ಮಹತ್ವದ ಬಗ್ಗೆ ತಿಳಿಸಿದರು.
ಮಂಗಳೂರು ಇದರ ಜಂಟಿ ನಿರ್ದೇಶಕರಾದ ಶ್ರೀ ಸುಂದರ್
ಶೇರಿಗಾರ್ ಇವರು ಮಾತನಾಡಿ ಉದ್ಯಮಿಗಳಿಗೆ ಹಣಕಾಸಿನ ನೆರವು,
ನೋಂದಣಿಯ ಪ್ರಯೋಜನಗಳು ಮತ್ತು ಕಾರ್ಯವಿಧಾನಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವನ್ನು ಕರ್ನಾಟಕ ತಾಂತ್ರಿಕ ಉನ್ನತೀಕರಣ ಮಂಡಳಿಯ ಸಹಾಯಕ ಸಲಹೆಗಾರರಾದ ಶ್ರೀ ಅರವಿಂದ್ ಬಾಲೇರಿ
ಇವರು ಸಂಯೋಜಿಸಿದರು.ಈ ಕಾರ್ಯಕ್ರಮದಲ್ಲಿ ಅಧ್ಯಾಪಕರು ,
ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಮಡಿಕೇರಿಯ ಕಾರ್ಪೊರೇಷನ್ ಬ್ಯಾಂಕಿನ
ಪ್ರಮುಖ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ಬಾಲಚಂದ್ರ,
ಮಣಿಪಾಲದ ಬಯೋಇನ್‌ಕ್ಯುಬೇಟರ್‌ನ ವ್ಯವಸ್ಥಾಪಕರಾದ ಡಾ.
ಕ್ಲಾವಿಯನ್ ಮಿರಾಂಡಾ, ಅಲರ್ ಇನ್ನೋವೇಶನ್‌ನ ವ್ಯವಸ್ಥಾಪಕ
ನಿರ್ದೇಶಕರಾದ ಡಾ. ಸಚಿನ್ ಭಟ್ ಮತ್ತು ನಿಟ್ಟೆ ಅಕ್ವಾಮರೀನ್ ಸೆಂಟರ್
ಆಫ್ ಎಕ್ಸಲೆನ್ಸ್ನ ಮುಖ್ಯಸ್ಥರಾದ ಆಶಿಕ್ ಶೆಟ್ಟಿ ಅವರ
ಉಪನ್ಯಾಸವನ್ನು ನಡೆಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿಗಲು ತಮ್ಮ ಉಪನ್ಯಾಸದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಉದ್ಯಮಶೀಲತೆಯ ಪ್ರಸ್ತುತತೆ ಮತ್ತು ಇಂಜಿನಿಯರಿಂಗ್ ಇನ್‌ಕ್ಯುಬೇಶನ್ ಪರಿಸರ ವ್ಯವಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅಗತ್ಯತೆಯನ್ನು ತಿಳಿಸಿದರು.
ಕಾರ್ಯಾಗಾರವು ಕರ್ನಾಟಕ ತಾಂತ್ರಿಕ ಉನ್ನತೀಕರಣ ಮಂಡಳಿ, ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆಗಳ ತಜ್ಞರಿಂದ ಸುಗಮಗೊಳಿಸಲ್ಪಟ್ಟ ಐಡಿಯಾ ಮೌಲ್ಯೀಕರಣ, ಮೂಲಮಾದರಿ ಅಭಿವೃದ್ಧಿ ಮತ್ತು ಇನ್‌ಕ್ಯುಬೇಶನ್ ಪ್ರಕ್ರಿಯೆಯ ಕುರಿತಾಗಿತ್ತು.

















