ಆದಾಯ ತೆರಿಗೆ ಇಲಾಖೆಯು 2025-26 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಅಂತಿಮ ದಿನ ಮತ್ತು ಗಡುವನ್ನು ಒಂದು ದಿನಕ್ಕೆ ವಿಸ್ತರಣೆ ಮಾಡಿದೆ.
ಜ.31 ರಂದು ನಿಗದಿಯಾಗಿದ್ದ ದಿನಾಂಕವನ್ನು 2025ರ ಸೆಪ್ಟೆಂಬರ್ 15 ರವರೆಗೆ ಈ ಹಿಂದೆ ವಿಸ್ತರಿಸಲಾಗಿದೆ. ಇದೀಗ ಸೆ.16ರಂದು ಅಂದರೆ ಇಂದು ಮಂಗಳವಾರ ಅಂತಿಮ ದಿನಾಂಕ ಎಂದು ಇಲಾಖೆ ತಿಳಿಸಿದೆ.
ಇನ್ನು ಈ ಕುರಿತು ಆದಾಯ ತೆರಿಗೆ ಇಲಾಖೆಯ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಸೆ.15 ರಾತ್ರಿ 11.48ಕ್ಕೆ ಪೋಸ್ಟ್ ಹಂಚಿಕೊಂಡಿದೆ.
ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ವೆಬ್ಸೈಟ್ incometax,gov.in ನಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಹಲವಾರು ತೆರಿಗೆದಾರರು ದೂರು ನೀಡಿದ ಹಿನ್ನಲೆ ಐಟಿಆರ್ ದಿನಾಂಕವನ್ನು ವಿಸ್ತರಣೆ ಮಾಡಿದೆ.
ಈ ಪೋಸ್ಟ್ ನಂತರ ಕೆಲವೇ ನಿಮಿಷಗಳ ನಂತರ, ಮತ್ತೊಂದು ಪೋಸ್ಟ್ ಸೋಮವಾರದವರೆಗೆ 7.3 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಇದು ಹೊಸ ದಾಖಲೆಯಾಗಿದೆ ಎಂದು ಹೇಳಿದೆ.












