ಯಕ್ಷ ಸಂಜೀವ ಯಕ್ಷಗಾನ ಕೇಂದ್ರ ಉದ್ಘಾಟನೆ

ಉಡುಪಿ: ಇಲ್ಲಿನ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದ ಉದ್ಘಾಟನಾ ಸಮಾರಂಭವು ಸೋಮವಾರದಂದು ಬುಡ್ನಾರುವಿನಲ್ಲಿ ನಡೆಯಿತು. ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮಿಜಿ ಅವರು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಂಜೀವ ಸುವರ್ಣರವರ ಸ್ವಂತಿಕೆಯನ್ನು ಬೆಳೆಸಲು ಎಲ್ಲರೂ ಸಹಕರಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ವಹಿಸಿದ್ದರು.

ಸಂಜೀವ ಸುವರ್ಣ ಅವರು ಕೇಂದ್ರದ ಬಗ್ಗೆ ತಮ್ಮ ಮುಂದಿನ ಯೋಜನೆಗಳನ್ನು ತಿಳಿಸಿ ಪೂರ್ವ ಪೀಠಿಕೆಯ ಪ್ರಯೋಗಕ್ಕೆ ಸಹಕರಿಸಿ ಎಂದರು.

ಹೇರಂಜೆ ಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಭಾಸ್ಕರಾನಂದ ಕುಮಾರ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್,ಜಯರಾಮ್ ಪಾಟೀಲ್ ಚೇರ್ಕಾಡಿ, ಪ್ರೊ. ವಿಜಯಕುಮಾರ್ ಉಪಸ್ಥಿತರಿದ್ದರು.
ಡಾ.ಪ್ರಶಾಂತ್ ಶೆಟ್ಟಿ ನಿರೂಪಿಸಿದರು.