ಉಡುಪಿ: ಕರ್ನಾಟಕ ಸರಕಾರದ ಇಂಧನ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (659) ವತಿಯಿಂದ ಉಡುಪಿ ಜಿಲ್ಲೆಯ ಉಡುಪಿ ನಗರದ ಹೃದಯಭಾಗದಲ್ಲಿರುವ ಕುಂಜಿಬೆಟ್ಟುವಿನಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಸಭಾ ಗೃಹ ಹಾಗೂ ಅತಿಥಿ ಗೃಹ ನಿರ್ಮಿಸಲಾಗಿದ್ದು, ಫೆ.28 ರಂದು ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರು ಉದ್ಘಾಟಿಸಲಿದ್ದಾರೆ.
ನಂತರದಲ್ಲಿ ಈ ಆವರಣದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಸಭಾ ಗೃಹವು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.