ಪರ್ಕಳ: ಪರ್ಕಳದ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಸಂಘವು ಪರ್ಕಳ ರಾಷ್ಟ್ರೀಯ ಹೆದ್ದಾರಿ ಪಾರ್ಶ್ವದಲ್ಲಿ ನಿರ್ಮಿಸಿದ ನೂತನ ಕಟ್ಟಡ “ಶ್ರೀ ದುರ್ಗಾ ಸಹಕಾರ ಸೌಧ” ಇಂದು (ಅ 12) ಬೆಳಿಗ್ಗೆ 10:30 ಉದ್ಘಾಟನೆ, ನಂತರ ಸಭಾಕಾರ್ಯಕ್ರಮ ಪರ್ಕಳ ಹೈಸ್ಕೂಲು ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಹಕಾರ ರತ್ನ ಡಾ। ಎಮ್.ಎನ್. ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಅಶೋಕ್ ಕಾಮತ್ ಕೊಡಂಗೆ ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಪರ್ಕಳ ಇವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ನಗರಸಭೆ ಉಡುಪಿಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಮಂಗಳೂರಿನ ಗೋಕುಲ್ ದಾಸ್ ನಾಯಕ್, ಜಿಲ್ಲಾ ಸಹಕಾರಿ ಯೂನಿಯನ್ ರಿ., ಉಡುಪಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಇಲಾಖೆ, ಉಡುಪಿಯ ಉಪನಿಬಂಧಕರಾದ ಲಾವಣ್ಯ ಕೆ.ಆರ್. ಸ್ಥಳೀಯ ನಗರಸಭಾ ಸದಸ್ಯರಾದ ಸುಮಿತ್ರಾ ಆರ್. ನಾಯಕ್ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ವೈಭವ:
ಇಂದು ಅಪರಾಹ್ನ ಗಂಟೆ 12.30ರಿಂದ ಸಾಂಸ್ಕೃತಿಕ ವೈಭವ ಜರಗಲಿದೆ. ಸಿಂಧೂ ಸಂಗೀತಾ ಬಳಗ ಉಡುಪಿ ಕಲರ್ಸ್ ಕನ್ನಡ ಖ್ಯಾತಿಯ ರಾಜ್ಯ ಪ್ರಶಸ್ತಿ ವಿಜೇತೆ, ಕರ್ನಾಟಕ ಸ್ಟೇಟ್ ಚಲನಚಿತ್ರ ಅವಾರ್ಡ್ ಮುಡಿಗೇರಿಸಿದ ಕಲಾವತಿ ದಯಾನಂದ್ ಇವರಿಂದ ಜಾನಪದ, ದಾಸ ಸಾಹಿತ್ಯ, ತತ್ವಪದಗಳು, ಭಾವ ಗೀತೆ, ದೇಶ ಭಕ್ತಿಗೀತೆ, ಭಕ್ತಿ ಗೀತೆ, ರಂಗ ಗೀತೆಗಳ ಕಲಾ ಸಂಗೀತದ ರಸಧಾರೆ ಕಾರ್ಯಕ್ರಮ ನಡೆಯಲಿದೆ.




















