ಮಣಿಪಾಲ: ದಿಯಾ ಜ್ಯೋತಿ ಫೌಂಡೇಶನ್ ಮಣಿಪಾಲ ಇದರ ಆಶ್ರಯದಲ್ಲಿ ನೇತ್ರಸಂಗಮ ಐ ಕೇರ್ ಆಂಡ್ ಲೇಸರ್ ಸೆಂಟರ್ ಮಣಿಪಾಲ ಹಾಗೂ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಒಪ್ಟೊಮೆಟ್ರಿ ವಿಭಾಗದ ಜಂಟಿ ಸಹಯೋಗದೊಂದಿಗೆ ಆರ್ ಎಸ್ ಬಿ ಸಭಾಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಶಿಬಿರಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಮಣಿಪಾಲ ನೇತ್ರಸಂಗಮದ ಹೆಸರಾಂತ ನೇತ್ರತಜ್ಞೆ ಡಾ. ಲಾವಣ್ಯ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಣಿಪಾಲ ಒಪ್ಟೊಮೆಟ್ರಿ ವಿಭಾಗದ ನಾಗರಾಜನ್, ನೇತ್ರಸಂಗಮದ ಹರಿಖಂಡಿಗೆ ಗಜಾನನ ನಾಯಕ್, ಜಿಪಂ ಮಾಜಿ ಅಧ್ಯಕ್ಷ ಬಿ.ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.
ದಿಯಾ ಜ್ಯೋತಿ ಫೌಂಡೇಶನ್ ಟ್ರಸ್ಟನ ಟ್ರಸ್ಟಿ ಬಂಟಕಲ್ಲು ರಾಮರಾಯ ಪಾಟ್ಕರ್ ಸ್ವಾಗತಿಸಿದರು. ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 70 ಜನರು ಭಾಗವಹಿಸಿ ನೇತ್ರ ತಪಾಸಣೆ ಮಾಡಿಕೊಂಡರು.












