ಉಡುಪಿ: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ದಿವ್ಯಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯ, ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ವತಿಯಿಂದ ಉಡುಪಿಯಲ್ಲಿ ನಡೆದ ಸಾಮಾಜಿಕ ಅಧಿಕಾರಿತ ಶಿಬಿರವನ್ನು ಶನಿವಾರದಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಡಿಯಲ್ಲಿ, ಜಿಲ್ಲೆಯ ವಿಕಲಚೇತನರಿಗೆ ಉಚಿತ ಸಾಧನ, ಸಲಕರಣೆಗಳನ್ನು ವಿತರಿಸಿದರು.
ಉಡುಪಿ ಜಿಲ್ಲೆಯಾದ್ಯಂತ ನಡೆಸಿದ ವೈದ್ಯಕೀಯ ತಪಾಸಣಾ ಶಿಬಿರಗಳ ಒಟ್ಟು 1390 ಫಲಾನುಭವಿಗಳಿಗೆ, ಒಟ್ಟು ರೂ 101.86 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಯಾರಿಸಲಾದ 2444 ಸಲಕರಣೆಗಳನ್ನು ವಿತರಿಸಲಾಯಿತು.