ಕಾರ್ಕಳ: ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಗ್ರಾಮೀಣ ಭಾಗದ ಜನರ ಪಾಲಿನ ಆಶಾಕಿರಣವಾಗಿದ್ದು, ಆಶಕ್ತರ ಬಾಳಿನಲ್ಲಿ ಭರವಸೆಯ ಬೆಳಕು ಚೆಲ್ಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನಾನಾಪಾಟೇಕರ್ ಸಭಾಭವನದಲ್ಲಿ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಿಸ್ತರಣಾ ನವೀಕೃತ ಕಟ್ಟಡ ಸಮೃದ್ಧಿ ಸಹಕಾರಿ ಸೌಧದ ಉದ್ಘಾಟನ ಸಭಾ ಕಾರ್ಯಕ್ರಮದ ಸಂದರ್ಭ ಸಂಘದ ಅಧ್ಯಕ್ಷ ಮುಂಡ್ಕೂರು ಸಾಂತ್ರಾಲಗುತ್ತು ವಾದಿರಾಜ ಶೆಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ|ರಾಮದಾಸ ಆಚಾರ್ಯ, ಸಚಿವ ವಿ. ಸುನಿಲ್ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಐಕಳಬಾವ ಡಾ|ದೇವಿ ಪ್ರಸಾದ್ ಶೆಟ್ಟಿ ಬೆಳಪು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ| ಎನ್.ಎಸ್.ಶೆಟ್ಟಿ, ಮುಂಡ್ಕೂರು ಚರ್ಚ್ ಧರ್ಮಗುರು ರೋನಾಲ್ಡ್ ಮಿರಾಂದ, ಆರ್ ಜೆಎಂ ಖತೀಬರು ಹಾರಿಸ್ ಮದನಿ, ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಸುಶೀಲ ಬಾಬು, ಉಪಾಧ್ಯಕ್ಷ ಭಾಸ್ಕರ್ ಎಂ. ಶೆಟ್ಟಿ, ಇನ್ನಾ ಗ್ರಾ.ಪಂ. ಅಧ್ಯಕ್ಷ ಕುಶ ಆರ್. ಮೂಲ್ಯ, ವಿಠೋಭ ದೇವಸ್ಥಾನದ ಮೊಕ್ತೇಸರ ವೆಂಕಟೇಶ್ ಕಾಮತ್, ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ, ಕಜೆ ಮಾರಿಗುಡಿ ದೇವಸ್ಥಾನದ ಗೌರವಾಧ್ಯಕ್ಷ ಎಂ. ಜಿ. ಕರ್ಕೇರಾ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ್ ಕುಮಾರ್ ಶೆಟ್ಟಿ ಪ್ರಗತಿಪರ ಕೃಷಿಕ ಸುಭೋದ ಶೆಟ್ಟಿ, ಸಂಘದ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಮೆಲ್ಲೊ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್, ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಇನ್ನಾ, ಮುಹಾಬಲ ಪೂಜಾರಿ, ಅಮರನಾಥ ಶೆಟ್ಟಿ ಇನ್ನಾ, ಉಮೇಶ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ಅಶೋಕ ಶೆಟ್ಟಿ ಖಂಡಿಗ, ಸಂಜೀವ, ಅನಸೂಯ ಸುಧಾಕರ ಶೆಟ್ಟಿ, ಲತಾ ಭಟ್ ಪೊಸ್ರಾಲು, ಕು.ಲೀಲಾ, ಜಯಂತ್ ಕುಮಾರ್ (ಆರ್ಥಿಕ ಪ್ರತಿನಿಧಿ) ಹಾಗೂ ಇತರ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಬ್ಯಾಂಕ್ ನ ಸಿಬ್ಬಂದಿಗಳಿದ್ದರು.
ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ ಅಭಿನಂದನ ಮಾತುಗಳನ್ನಾಡಿದರು. ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಮೆಲ್ಲೊ ವಂದಿಸಿ, ಸಂಗೀತಾ ಕುಲಾಲ್ ನಿರೂಪಿಸಿದರು.