ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಸಭಾಭವನ, ಗೋದಾಮು ಹಾಗೂ ಸೇವಾ ಕೇಂದ್ರ ಉದ್ಘಾಟನೆ

ಕುಂದಾಪುರ: ಭಾನುವಾರದಂದು ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಪ್ರಧಾನ ಕಚೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಿ.ಸಿ. ಹೊಳ್ಳ ಸ್ಮಾರಕ ಸಭಾಭವನ, ಗೋದಾಮು ಮತ್ತು ಸೇವಾ ಕೇಂದ್ರದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇವರು ನೆರವೇರಿಸಿ ಮಾತನಾಡಿ, ಕೋಟ ಸಿಎ ಬ್ಯಾಂಕ್ ರೈತರು, ಬಡವರು ಮತ್ತು ಮಧ್ಯಮ ವರ್ಗದವರಿಗೆ ಶಕ್ತಿ ತುಂಬಿದ ಸಂಸ್ಥೆಯಾಗಿದೆ. ಪ್ರಸ್ತುತ ತಿಮ್ಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿ ಮುನ್ನಡೆಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ‌. ತಿಮ್ಮ ಪೂಜಾರಿ ವಹಿಸಿದ್ದರು. ಅಮೃತೇಶ್ವರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ದೇವಿ ಪ್ರಸಾದ್ ಶೆಟ್ಟಿ, ಹೈನುಗಾರಿಕೆ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾನಕಿ ಹಂದೆ, ಕಂಬಳ ಕ್ಷೇತ್ರದ ಸಾಧಕ ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಸಿಇಓ ಶ್ರೀಧರ ಸೋಮಯಾಜಿ, ಕಟ್ಟಡದ ಎಂಜಿನಿಯರ್ ಚೇತನ್, ಗುತ್ತಿಗೆದಾರ ಸಂತೋಷ್, ಪವರ್ ಲಿಫ್ಟಿಂಗ್ ನಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಕಾರ್ತಿಕ್ ಇವರನ್ನು ಸನ್ಮಾನಿಸಲಾಯಿತು.

ಸ್ಥಳೀಯ ಪಂಚವರ್ಣ ಯುವಕ ಮಂಡಲ ಹಾಗೂ ಸಿಬ್ಬಂದಿ ವತಿಯಿಂದ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಅವರನ್ನು ಗೌರವಿಸಲಾಯಿತು.

ಉಡುಪಿ ಭೂ ಅಭಿವೃದ್ದಿ ಬ್ಯಾಂಕ್ ಉಪಾಧ್ಯಕ್ಷ ಶಿವರಾಮ ಉಡುಪ, ಕೋಟ ಗ್ರಾಂ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ಕಾರಂತ ಹಾಗೂ ಕೋಟ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ರಾಜು ದೇವಾಡಿಗ, ನಿರ್ದೇಶಕ ಡಾ.ಕೃಷ್ಣ ಕಾಂಚನ್, ಕೆ. ಉದಯಕುಮಾರ ಶೆಟ್ಟಿ, ಮಹೇಶ ಶೆಟ್ಟಿ ಎಂ., ರವೀಂದ್ರ ಕಾಮತ್, ರಾಜೇಶ ಉಪಾಧ್ಯ, ಎಚ್. ನಾಗರಾಜ ಹಂದೆ, ರಂಜಿತ್ ಕುಮಾರ್, ಗೀತಾ ಶಂಭು ಪೂಜಾರಿ, ಪ್ರೇಮ ಎಸ್., ರಶ್ಮಿತಾ, ಕೆ.ಶ್ರೀಕಾಂತ ಶೆಣೈ, ಭಾಸ್ಕರ ಶೆಟ್ಟಿ, ಅಚ್ಯುತ ಪೂಜಾರಿ, ಮಾಜಿ ನಿರ್ದೇಶಕ ವಸಂತ್ ಶೆಟ್ಟಿ, ಗುಲಾಬಿ ದೇವದಾಸ್ ಬಂಗೇರ, ಮಾಜಿ ಸಿಇಒ ಶೋಭಾ ಶೆಟ್ಟಿ, ಸಹಾಯಕ ಸಿಇಒ ಕುಮಾರ್, ಎಸ್ ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ರಾಜಾರಾಮ ಶೆಟ್ಟಿ, ಸಂಸ್ಥೆಯ ಮಾಜಿ ಅಧ್ಯಕ್ಷ ಭೋಜ ಹೆಗ್ಡೆ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷ ಕೊರಗ ಪೂಜಾರಿ, ಹಾವಂಜೆ ರಮೇಶ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಹಾಗೂ ಉದ್ಯಮಿ ಬಡಾಮನೆ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ನಿರ್ದೇಶಕ ಟಿ. ಮಂಜುನಾಥ ಸ್ವಾಗತಿದರು. ಪ್ರಭಾರ ಸಿಇಒ ಶರತ್ ಕುಮಾರ್ ಶೆಟ್ಟಿ ವರದಿ ವಾಚಿಸಿದರು. ದೈ.ಶಿ. ಶಿಕ್ಷಕ ಸತೀಶ್ ಶೆಟ್ಟಿ ನಿರೂಪಿಸಿದರು.