ಪಡುಬಿದ್ರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ.ಆಪರೇಟಿವ್ ಸೊಸೈಟಿಯ ಉಡುಪಿ ಜಿಲ್ಲೆಯ ಪ್ರಥಮ ಶಾಖೆಯನ್ನು ಪಡುಬಿದ್ರಿ ಶ್ರೀ ಮಹಾ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಯಿತು.
ನೂತನ ಶಾಖೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾತನಾಡಿ, ಹಳೆಯಂಗಡಿಯ ಭೀಷ್ಮ ದಿ.ನಾರಾಯಣ ಸನಿಲ್ ರವರ ಆದರ್ಶಗಳ ಮೂಲಕ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೊ.ಆಪರೇಟಿವ್ ಸೊಸೈಟಿ ಪ್ರಾಮಾಣಿಕತೆಯ ಸೇವೆ ನೀಡುವ ಮೂಲಕ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ಸಹಕಾರಿ ಕ್ಷೇತ್ರದಲ್ಲಿ ಗ್ರಾಹಕ ಸ್ನೇಹಿಯಾಗಿ ಸೊಸೈಟಿಯು ಇನ್ನಷ್ಟು ಸಾಧನೆ ಮಾಡಲಿ ಎಂದರು.
ಸೊಸೈಟಿಯ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಪ್ರಸ್ತುತ 12 ಕೋಟಿ ರೂ ಠೇವಣಿ ಹೊಂದಿದ್ದು, ಪ್ರಥಮ ವರ್ಷದಲ್ಲಿಯೇ ಲಾಭವನ್ನು ದಾಖಲಿಸಿದೆ. ಸಂಘದ ಮೂಲಕ ಉಭಯ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ, ಸಹಕಾರ ಮತ್ತು ಸಾಮಾಜಿಕ ಸೇವೆ ಮಾಡುವ ಗುರಿ ಇದೆ ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಲೋಕಾರ್ಪಣೆ ಮಾಡಿದರು. ಮಿಥುನ್ ರೈ ಪ್ರಿಯದರ್ಶಿನಿ ಸ್ವ ಸಹಾಯ ಗುಂಪಿಗೆ ಚಾಲನೆ ನೀಡಿದರು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ರತ್ನಾಕರ್ ರಾಜ್ ಅರಸು ಕಿನ್ಯಕ್ಕ ಠೇವಣಿ ಪತ್ರವನ್ನು ಬಿಡುಗಡೆ ಮಾಡಿದರು. ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀ ನಾರಾಯಣ್ ಪಾಸ್ ಬುಕ್ ವಿತರಿಸಿದರು.
ಸೊಸೈಟಿಯ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ಸಿ.ಇ.ಒ ಸುದರ್ಶನ್, ಮಂಗಳೂರಿನ ಕರ್ನಾಟಕ ದೈವ ಶಾಸ್ತ್ರೀಯ ಮಹಾವಿದ್ಯಾಲಯದ ಪ್ರಾಂಶುಪಾಲ ರೆ.ಡಾ.ಹ್ಯೂಬಟ್ ಎಂ ವಾಟ್ಸನ್, ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ ಸೂರ್ಯ ಕುಮಾರ್ ಹಾಗೂ ಪಡುಬಿದ್ರೆ ಹಿಮಾಯತ್ ಇಸ್ಲಾಂ ಸಂಘದ ಅಧ್ಯಕ್ಷ ಶಬೀರ್ ಹುಸೇನ್ , ಉಡುಪಿಯ ನಾದ ಕೋ.ಆಪ್ ಸೊಸೈಟಿಯ ಅಧ್ಯಕ್ಷ ಶ್ರೀಧರ್ ದೇವಾಡಿಗ, ಪಡುಬಿದ್ರೆ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್ ಚಂದ್ರ ಶೆಟ್ಟಿ, ಮಾಜಿ ಅಧ್ಯಕ್ಷೆ ಸಂಜೀವಿ ಪೂಜಾರ್ತಿ, ದಮಯಂತಿ ವಿ ಅಮೀನ್ ಮತ್ತು ಕಟ್ಟಡದ ಮಲೀಕ ಸುಧಾಕರ್ ದೇವಾಡಿಗ, ಸಂಕಮಾರ್ ಧನಂಜಯ ಮಟ್ಟು, ಗೌತಮ್ ಜೈನ್, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸೊಸೈಟಿಯ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ಪ್ರಕಾಶ್ ಕಿನ್ನಿಗೋಳಿ ನಿರೂಪಿಸಿದರು.