ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರ ಪ್ರದೇಶದ ಸಮುದಾಯಕ್ಕೆ ಹಾಗೂ ವಲಸಿಗರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಉಡುಪಿ ತಾಲೂಕಿನ ಬೀಡನಗುಡ್ಡೆ, ನಿಟ್ಟೂರು ಹಾಗೂ ಕಕ್ಕುಂಜೆಯಲ್ಲಿ, ಕುಂದಾಪುರ ತಾಲೂಕಿನ ಖಾರ್ವಿಕೇರಿ ಹಾಗೂ ಟಿ.ಟಿ ರೋಡ್ ಮತ್ತು ಕಾರ್ಕಳ ತಾಲೂಕಿನಲ್ಲಿ ಮರೀನಾಪುರ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ನಮ್ಮ ಕ್ಲಿನಿಕ್ಗಳ ಉದ್ಘಾಟನೆಯು ಡಿಸೆಂಬರ್ 14 ರಂದು ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.