ಉಡುಪಿ: ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನೂತನ ಲಯನ್ಸ್ ಕ್ಲಬ್ ಕೆಮ್ಮಣ್ಣು ಇದರ ಉದ್ಘಾಟನೆಯನ್ನು ಲಯನ್ಸ್ ಜಿಲ್ಲೆ 317ಸಿಯ ಗವರ್ನ್ರರವರ ಪದಪ್ರಧಾನ ಸಮಾರಂಭದಲ್ಲಿ ಲಯನ್ಸ್ ಅಂತರಾಷ್ಟ್ರೀಯ ನಿರ್ದೇಶಕ ಕೃಷ್ಣ ರೆಡ್ಡಿ ನೆರವೇರಿಸಿದರು.
ಕ್ಲಬ್ನ ಸ್ಥಾಪಕ ಅಧ್ಯಕ್ಷರಾಗಿ ಜಗದೀಶ್ ಕೆಮ್ಮಣ್ಣು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಲಯನ್ಸ್ ಅಂತರಾಷ್ಟ್ರೀಯ ನಿರ್ದೇಶಕರಾದ ಪಂಕಜ್ ಮೆಹ್ರಾ, ಲಯನ್ ಗವರ್ನರ್ ಕೋಟ್ಯಾನ್ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾಜಿ ಲಯನ್ಸ್ ಗವರ್ನರ್ ಎನ್.ಎಂ. ಲಯನ್ಸ್ ಕಾರ್ಯದರ್ಶಿ ಸದಾನಂದ ನಾವಡ, ಜಿಲ್ಲಾ ಲಯನ್ಸ್ ಪದಪ್ರಧಾನ ಸಮಿತಿ ಸಿದ್ಧರಾಜು, ವಿಸ್ತರಣಾ ಚೇರ್ಮನ್ ನಂದಕಿಶೋರ್, ಕೆಮಣ್ಣು, ಪ್ರಾಯೋಜಿತ ಉಭಯ ಲಯನ್ಸ್ ಕ್ಲಬ್ಗಳಾದ ಕಲ್ಯಾಣಪುರದ ಅಧ್ಯಕ್ಷ ಎಲ್ಲನ್ ಫೆರ್ನಾಂಡಿಸ್ ಹಾಗೂ ಕುಂದಾಪುರ ವೈಟ್ ರೋನ್ ಅಧ್ಯಕ್ಷ ಹುಸೇನ್ ಹೈಕಾಡಿ, ಕ್ಲಬ್ನ ಕಾರ್ಯದರ್ಶಿ ಸುಧಾಕರ ಕೋಟ್ಯಾನ್, ಕೋಶಾಧಿಕಾರಿ ಹರೀಶ್ ಪಾಲನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.















