ಹೆಬ್ರಿಯಲ್ಲಿ ಇಂದು ಕಲ್ಪರಸ ಮಳಿಗೆ ಉದ್ಘಾಟನೆ..

ಹೆಬ್ರಿ: ರುಚಿಕರವೂ.. ಆರೋಗ್ಯಕರವೂ.. ಆದ ಕಲ್ಪರಸ ಸಮೃದ್ಧಿ ಸ್ವದೇಶಿ ಉತ್ಪನ್ನಗಳ ಮಳಿಗೆ ಇಂದು ಹೆಬ್ರಿಯ ಬಸ್ ನಿಲ್ದಾಣದ ಎದುರುಗಡೆ ಇರುವ ರಾಮನಾಥ (ಪೂಜಾ) ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು.

ಉಕಾಸ ಕಂಪೆನಿ ಉಡುಪಿಯ ಅಧ್ಯಕ್ಷರಾದ ಸತ್ಯನಾರಾಯಣ ಉಡುಪ ಮಳಿಗೆಯನ್ನು ಉದ್ಘಾಟಿಸಿದರು. ಜಗನ್ನಾಥ ಶೆಣೈ, ಕಟ್ಟಡ ಮಾಲಕರಾದ ಅನಂತ ನಾಯಕ್ ಹಾಗೂ ಸಮೃದ್ಧಿ ಸ್ವದೇಶಿ ಉತ್ಪನ್ನಗಳ ಮಳಿಗೆ ಮಾಲಕರಾದ ಸುದೇಶ್ ಪ್ರಭು ಉಪಸ್ಥಿತರಿದ್ದರು.

ಕುಂದಾಪುರದಾದ್ಯಂತ ಪರಿಚಿತಗೊಂಡಿರುವ ಕಲ್ಪರಸ ಇದೀಗ ಹೆಬ್ರಿಯಲ್ಲಿ ಕೂಡ ಲಭ್ಯವಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಅನ್ನುವಂತೆ ಕೆಮಿಕಲ್ ರಹಿತವಾಗಿದ್ದು, ಸಕ್ಕರೆ ಖಾಯಿಲೆಯವರೂ ಬಳಸಬಹುದಾದ ಏಕೈಕ ಪಾನೀಯ ಕಲ್ಪರಸವಾಗಿದೆ.

ಉಕಾಸ ಕಂಪೆನಿಯ ಅಧಿಕೃತ ಮಾರಾಟ ಮಳಿಗೆ ಇದಾಗಿದ್ದು, ಕಲ್ಪರಸವು ಆರೋಗ್ಯಕರವಾದ ಅಮಲು ರಹಿತ ಪಾನೀಯವಾಗಿದೆ.

ಕಲ್ಪರಸದ ವಿಶೇಷತೆ:

ತೆಂಗಿನಮರದ ಇನ್ನೂ ಅರಳದ ಹೊಂಬಾಳೆಯನ್ನು ಹದಗೊಳಿಸಿ ಶೀತಲೀಕೃತ ಪೆಟ್ಟಿಗೆಯ ಮೂಲಕ ಸಂಗ್ರಹಿಸುವ ನೈಸರ್ಗಿಕ ಪಾನೀಯವೇ ಕಲ್ಪರಸ. ಔಷಧೀಯ ಗುಣಗಳನ್ನು ಹೊಂದಿರುವ ಕಲ್ಪರಸ ಮಧುಮೇಹಿಗಳೂ ಉಪಯೋಗಿಸಬಹುದಾದ ಏಕೈಕ ಪಾನೀಯವಾಗಿದೆ. ರಕ್ತದೊತ್ತಡ, ದ್ರಷ್ಟಿದೋಷ, ಮೈಗ್ರೇನ್ ತಲೆನೋವು, ಮೂತ್ರಕೋಶದ ಸಮಸ್ಯೆ, ಅಸ್ತಮಾ, ಚರ್ಮದ ಅಲರ್ಜಿ ಜ್ವರ ಶಮನ, ಕ್ಯಾನ್ಸರ್ ತಡೆಗೆ ಪೂರಕವಾದ ಗುಣಗಳನ್ನು ಹೊಂದಿರುವ ಇದು ರೋಗನಿರೋಧಕ ಶಕ್ತಿಯನ್ನೂ ಹೊಂದಿವೆ ಎಂದು ವೈದ್ಯರು ಹೇಳುತ್ತಾರೆ.

ಯಾವುದೇ ಸಮಾರಂಭಕ್ಕೆ ಬೇಕಾದಲ್ಲಿ ಮೊದಲೇ ಆರ್ಡರ್ ಮಾಡಿದ್ದಲ್ಲಿ ನಿಮ್ಮ ನೆಚ್ಚಿನ ಕಲ್ಪರಸವು ನಿಮಗೆ ಲಭ್ಯವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ M:9480205917