ಉಡುಪಿ: ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಜುಲೈ 14 ರಂದು ಉಡುಪಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ &ಜ್ಯುವೆಲರಿ (IIGJ)ಯಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಸಕಲ ಸೌಲಭ್ಯವನ್ನು ಒದಲಾಗಿಸುವುದು ಎಂದು ಭರವಸೆ ನೀಡಿದರು. ಸಂಸ್ಥೆಯ ಸ್ವಂತ ಕಟ್ಟಡಕ್ಕೆ ಬೇಕಾದ ಜಾಗವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಸಮಾರಂಭದಲ್ಲಿ GJEPC ಯ ಮಾಜಿ ಅಧ್ಯಕ್ಷಪ್ರವೀಣ್ ಶಂಕರ್ ಪಂಡ್ಯಾ, ಉಪಾಧ್ಯಕ್ಷ ಕಿರೀಟ್ ಬನ್ಸಲ್, ನಿರ್ದೇಶಕ ಎಮರಾಲ್ಡ್ ಶ್ರೀನಿವಾಸನ್, ಜೆಮ್ &ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್ ನಿರ್ದೇಶಕ, ಕೆಜೆಫ್ ಸ್ಥಾಪಕಾಧ್ಯಕ್ಷ ನೋವೆಲ್ಟಿ ಜಯ ಆಚಾರ್ಯ ಹಾಗೂ ಉಡುಪಿ ಜ್ಯುವೆಲರ್ಸ್ ಅಸೋಸಿಯೇಷನ್ ನ ಸದಸ್ಯರು ಭಾಗವಹಿಸಿದ್ದರು.