ಉಡುಪಿ: ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಎಸ್ ವಿ ಎಸ್ ಹಳೆ ವಿದ್ಯಾರ್ಥಿ ಸಂಘ (ರಿ) ಕಟಪಾಡಿ ಇವರ ಸಹಯೋಗದಲ್ಲಿ ಆ.15 ರಿಂದ 24ರ ವರೆಗೆ 10 ದಿನಗಳ ಕಾಲ “ಉಚಿತ ಪ್ರಾಣ ಯೋಗ ಶಿಬಿರ” ವನ್ನು ಕಟಪಾಡಿಯ ಮಹಿಳಾ ಮಂಡಲದ ಸಭಾ ಭವನದಲ್ಲಿ ಭಾನುವಾರ ದೀಪ ಪ್ರಜ್ವಲಿಸಿ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ರಾಘವೇಂದ್ರ ಭಟ್ , ವೆಂಕಟೇಶ್ ಮೇಹಂದಲೆ ಹಾಗೂ ಜಗದೀಶ್ ಕುಮಾರ್ ಇವರು ಉಪಸ್ಥಿತರಿದ್ದರು.
ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಸತ್ಯೇಂದ್ರ ಪೈ ಶಿಬಿರವನ್ನು ಉದ್ಘಾಟಿಸಿದರು.
ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಕಟಪಾಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಮಹೇಶ್ ಅಂಚನ್ , ರವಿರಾಜ್ ಶೆಟ್ಟಿ ಉಪಸಿತರಿದ್ದರು. ಕಟಪಾಡಿ ಪತಂಜಲಿ ಯೋಗ ಕಕ್ಷೆಯ ರಾಜೇಶ್ ಕಾಮತ್ ರಾಮಚಂದ್ರ ಪೈ ಶಿಬಿರವನ್ನು ಆಯೋಜಿಸಿದ್ದರು.
ಹಳೆ ವಿದ್ಯಾರ್ಥಿ ಸಂಘದ ನಾಗೇಶ್ ಕಾಮತ್ ಸ್ವಾಗತಿಸಿ, ವಂದಿಸಿದರು.