ಬೈಲಕೆರೆ: ಬೈಲಕೆರೆ ಯುವಕ ಮಂಡಲದ ಸಹಯೋಗದಲ್ಲಿ ಬೈಲಕೆರೆ ಮಾಹಿತಿ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ರಸ್ತೆ ಸುರಕ್ಷಾ ದರ್ಪಣದ ಬಿಡುಗಡೆ ಕಾರ್ಯಕ್ರಮ ಭಾನುವಾರ ಬೈಲಕೆರೆಯಲ್ಲಿ ನಡೆಯಿತು.
ಉಡುಪಿ ತಾಪಂ ಕಾರ್ಯನಿರ್ವಣಾಧಿಕಾರಿ ಮೋಹನ್ ರಾಜ್ ಅವರು ಸೇವಾ ಕೇಂದ್ರ ಹಾಗೂ ರಸ್ತೆ ಸುರಕ್ಷಾ ದರ್ಪಣವನ್ನು ಉದ್ಘಾಟಿಸಿದರು. ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಪ್ರೀಮಾ ಲವೀನ, ಅಂಗನವಾಡಿ ಶಿಕ್ಷಕಿ ಸುನೀತಾ, ಆಶಾ ಕಾರ್ಯಕರ್ತೆ ಲೀಲಾ, ಯುವಕ ಮಂಡಲ ಅಧ್ಯಕ್ಷ ಶ್ರೀಜಿತ್ ಬೈಲಕೆರೆ ಉಪಸ್ಥಿತರಿದ್ದರು.
ಸೇವಾ ಕೇಂದ್ರದಿಂದ ಯೋಜನೆಗಳ ಮಾಹಿತಿ:
ಬೈಲಕೆರೆ ಯುವಕಮಂಡಲದ ಸೇವಾ ಮಾಹಿತಿ ಕೇಂದ್ರದಲ್ಲಿ ಸರಕಾರದ ಯೋಜನೆಗಳ ಮಾಹಿತಿ ಹಾಗೂ ಸಂಬಂಧಪಟ್ಟ ದಾಖಲಾತಿಗಳ ಮಾಹಿತಿ ಒದಗಿಸಿ ಜನರನ್ನು ವಿವಿಧ ಕಚೇರಿಗಳಿಗೆ ಹೋಗಿ ಮಾಹಿತಿ ಪಡೆಯುವ ಸಲುವಾಗಿ ತಗಲುವ ಸಮಯವನ್ನು ಕಡಿತಗೊಳಿಸಿ ಸಮಗ್ರವಾಗಿ ಮಾಹಿತಿ ನೀಡಲಾಗುವುದು.