ವಾಮಂಜೂರು: ಬೆಥನಿ ಪ್ರಾಂತೀಯ ಸಂಸ್ಥೆಯ ಹೊಸ ಕಟ್ಟಡದ ಉದ್ಘಾಟನೆ

ವಾಮಂಜೂರು: ಬೆಥನಿ ಪ್ರಾಂತೀಯ ಸಂಸ್ಥೆ ಇದರ ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಡಿ. 3 ರಂದು ದಿವ್ಯ ಬಲಿಪೂಜೆಯೊಂದಿಗೆ ನೆರವೇರಿತು. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಪೂಜಾವಿಧಿಯನ್ನು ನೆರವೇಸಿದರು.

ಬೆಥನಿ ಸಂಸ್ಥೆಯ ಮಹಾಮಾತೆ ಭಗಿನಿ ರೋಸ್ ಸೆಲಿನ್‌ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಸಂಸ್ಥೆಯ ಪ್ರಾಂತ್ಯಾಧಿಕಾರಿಣಿ ಭಗಿನಿ ಸಿಸಿಲಿಯಾ ಮೆಂಡೊನ್ಸಾ ನಾಮ ಫಲಕ ಅನಾವರಣಗೊಳಿಸಿದರು. ಬಿಷಪ್ ಹಾಗೂ ಸಹ ಗುರುಗಳು ಕಟ್ಟಡವನ್ನು ಆಶೀರ್ವಚಿಸಿದರು. ಭಗಿನಿ ರೊಯ್ಲಿನ್ ಮತ್ತು ಭಗಿನಿ ಶುಭ ಆಶೀರ್ವಚನ ಕಾರ್ಯಕ್ರಮವನ್ನು ನಿರೂಪಿಸಿದರು.

ಭಗಿನಿ ರೋಸ್ ಸೆಲಿನ್‌ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಬೆಥನಿ ಭಗಿನಿಯರು ತಮ್ಮ ಸಂಸ್ಥಾಪಕರ ಆಶಯವನ್ನು ಪೂರೈಸಲು ಕರೆ ನೀಡಿದರು. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದ ಇಂಜಿನಿಯರ್, ಗುತ್ತಿಗೆದಾರರು ಹಾಗೂ ಇತರ ಕಾರ್ಮಿಕರಿಗೆ ಕಾಣಿಕೆಯನ್ನಿತ್ತು ಗೌರವಿಸಲಾಯಿತು.

ಸಂಸ್ಥೆಯ ಖಜಾಂಚಿ ಭಗಿನಿ ಫ್ಲಾವಿಯ ವಿಲ್ಮ, ಪ್ರಾಂತ್ಯಾಧಿಕಾರಿಣಿ ಭಗಿನಿ ಸಿಸಿಲಿಯಾ ಮೆಂಡೊನ್ಸಾ, ಮಹಾಮಾತೆ ಭಗಿನಿ ರೋಸ್‌ ಸೆಲಿನ್ ಇವರನ್ನು ಕಟ್ಟಡ ಯೋಜನಾ ಕಾರ್ಯವನ್ನು ನೆರವೇರಿಸಿದಕ್ಕಾಗಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ವಾಮಂಜೂರು ಚರ್ಚಿನ ಮುಖ್ಯ ಗುರುಗಳು ವಂದನೀಯ ಗುರು ಜೇಮ್ಸ್ ಡಿಸೋಜಾ, ಸಂತ ಜೋಸೆಫ್‌ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕ ವಂದನೀಯ ಗುರು ಕೆನೆತ್‌ ಕ್ರಾಸ್ತಾ ತಮ್ಮ ಭಾಷಣದಲ್ಲಿ ಬೆಥನಿ ಭಗಿನಿಯರ ಸೇವೆಯನ್ನು ಶ್ಲಾಘಿಸಿದರು.

ಸಂತ ರೇಮಂಡ್‌ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ವಿತಾಲಿಸ್‌ರ ವೇದಿಕೆಯಲ್ಲಿಉಪಸ್ಥಿತರಿದ್ದರು.

ಭಗಿನಿ ಲೊಲಿಟಾ ಪಿರೇರಾ ಹಾಗೂ ಸಹ ಬಳಗದ ಭಗಿನಿಯರು ಪ್ರಾರ್ಥಿಸಿದರು. ರೋಸಾ ಮಿಸ್ತಿಕಾ ಭಗಿನಿ ತರಬೇತಿ ಕೇಂದ್ರದ ಭಗಿನಿಯರು ಸ್ವಾಗತ ನೃತ್ಯ ಪ್ರದರ್ಶಿಸಿದರು. ಭಗಿನಿ ಸಿಸಿಲಿಯಾ ಮೆಂಡೊನ್ಸಾ ಸ್ವಾಗತಿಸಿದರು. ಭಗಿನಿ ರೋಶಲ್ ಹಾಗೂ ಭಗಿನಿ ಲಿಲ್ಲಿ ಪಿರೇರಾ ವ್ಯಕ್ತಿ ಪರಿಚಯ ಮಾಡಿದರು. ಭಗಿನಿ ಶಾಂತಿ ಫ್ಲಾವಿಯಾ ಕಾರ್ಯಕ್ರಮ ನಿರೂಪಿಸಿದರು. ಭಗಿನಿ ಅನ್ನಾ ಮರಿಯ ವಂದಿಸಿದರು.