ಬ್ರಹ್ಮಾವರ: ಬಾರಕೂರು ಮದರ್ ಎನ್ ಕ್ಲೇವ್ ನ ಮೊದಲ ಮಹಡಿಯಲ್ಲಿ ಸೆ.26 ರಂದು ಬಾರಕೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉದ್ಘಾಟನೆಗೊಂಡಿತು.
ಹಿರಿಯ ಉದ್ಯಮಿ ವೈ. ಗಣಪತಿ ಕಾಮತ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆಯ ಬಿ. ಶ್ರೀನಿವಾಸ ಶೆಟ್ಟಿಗಾರ್, ಬ್ರಹ್ಮಾವರದ ಲೆಕ್ಕಪರಿಶೋಧಕ ಸಿಎ ಕೆ. ಪದ್ಮನಾಭ ಕಾಂಚನ್, ಬಾರಕೂರು ಯುನಿಟಿ ಶ್ಯಾಮಿಯಾನದ ಶೌಕತ್ ಅಲಿ, ಪಾಯಸ್ ಎಂಟರ್ ಪ್ರೈಸಸ್ ನ ಸ್ಟ್ಯಾನಿ ಪಾಯಸ್ ಶುಭ ಹಾರೈಸಿದರು.
ಸೊಸೈಟಿಯ ಅಧ್ಯಕ್ಷ ಶರತ್ ಆಚಾರ್ಯ ಯಡ್ತಾಡಿ, ಉಪಾಧ್ಯಕ್ಷ ಉದಯ ಕೆ. ಮೂಡ್ಲಕಟ್ಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ಭಂಡಾರಿ ಪಾಂಗಾಳ, ನಿರ್ದೇಶಕರಾದ ನರಸಿಂಹ ನಾಯ್ಕ ಯಡ್ತಾಡಿ, ಶ್ರೀಕಾಂತ ಆಚಾರ್ಯ ಕಲ್ಚಪ್ರ, ಹರೀಶ್ ಪಡುಕರೆ, ಸತ್ಯನಾರಾಯಣ ಆಚಾರ್ಯ ಕಂಡ್ಲೂರು, ವಾಸುದೇವ ಪುತ್ತೂರು, ಗುಣಶೀಲಶೆಟ್ಟಿ ವಂಡಾರು, ಸಂತೋಷ ಆಚಾರ್ಯ ಪೇತ್ರಿ, ಮಹೇಶ ನಾಯ್ಕ ಯಡ್ತಾಡಿ, ವ್ಯವಸ್ಥಾಪಕ ಅಶೋಕ ಕುಮ್ರಗೋಡು ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡ ಮಾಲಕ ರೋಲ್ಫ್ ಬೊನಿಫಾಸ್ ಮಂತೇರೋ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಸಂಸ್ಥೆಯ ಶೇರು ಪತ್ರ, ಠೇವಣಿ, ಉಳಿತಾಯ ಖಾತೆ ಹಾಗೂ ಸಾಲ ಪತ್ರಗಳನ್ನು ಅತಿಥಿಗಳು ವಿತರಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸುಧಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.