ಕಾರ್ಕಳ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆಯ ನೂತನ ಸ್ವಂತ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಪ್ರೊ. ನವೀನ್‌ಚಂದ್ರ ದಂಪತಿ ಅವರನ್ನು ಸಮ್ಮಾನಿಸಲಾಯಿತು. ಸಮಾಜದ ಹಿರಿಯರು, ಪದಾಧಿಕಾರಿಗಳು, ನಿರ್ದೇಶಕರು, ಸಿಬಂದಿ, ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.
ಪುರಸಭೆ ಅಧ್ಯಕ್ಷ ಯೋಗಿಶ್ ದೇವಾಡಿಗ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್‌ಶೆಟ್ಟಿ ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಮಂಜುನಾಥ ಎಸ್.ಕೆ., ಹರ್ಷ ಭಾರತಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಹರೀಶ್ ಸುವರ್ಣ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಮಹಾಮಂಡಲದ ಪ್ರಧಾನಕಾರ್ಯದರ್ಶಿ ಶೇಖರ್‌ಭಂಡಾರಿ, ಉದ್ಯಮಿ ಮಹಾವೀರ, ಹೆಗ್ಡೆ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ. ಎಸ್., ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ರಾಜು ಸಿ. ಭಂಡಾರಿ, ತಾಲೂಕು ಸವಿತಾ ಸಮಾಜ ಅಧ್ಯಕ್ಷ ನಾಗೇಶ್ ಭಂಡಾರಿ, ಕಾರ್ಯದರ್ಶಿ ಪ್ರವೀಣ್ ಭಂಡಾರಿ, ನಿರ್ದೇಶಕರಾದ ಸದಾಶಿವ ಬಂಗೇರ ಕುರ್ಕಾಲು, ವಿಶ್ವನಾಥ ಭಂಡಾರಿ ನಿಂಜೂರು, ಶೇಖರ ಸಾಲಿಯಾನ್ ಆದಿಉಡುಪಿ, ಸತೀಶ್ ಭಂಡಾರಿ ಕಾಪು, ಸುಮನ ಕೃಷ್ಣ ಭಂಡಾರಿ ಕಾರ್ಕಳ, ಶಿವಾನಂದ ಸಾಲ್ಯಾನ್ ಬೆಳ್ಳಣ್, ನವೀನ್ ಭಂಡಾರಿ ಬಸ್ರೂರು, ರಾಜು ಭಂಡಾರಿ ಕಿನ್ನಿಮುಲ್ಕಿ, ಶಿವರಾಮ ಭಂಡಾರಿ ಹಂದಾಡಿ, ಪಿ. ಚಂದ್ರಶೇಖರ್ ಭಂಡಾರಿ ಹುಣ್ಸೆಮಕ್ಕಿ, ಗೋಪಾಲ್ ಮಲ್ಯ ಬೈಂದೂರು, ಶ್ರೀಲತ ನರೇಂದ್ರ ಸಾಲ್ಯಾನ್, ಕಾಪು, ನಾಮನಿರ್ದೇಶಕರಾದ ಕೆ. ದಿನೆಶ್ ಭಂಡಾರಿ ಕೊಕ್ಕರ್ಣೆ ಸಂಘದ ಸಿಇಒ ಮಾಲತಿ ಅಶೋಕ್ ಭಂಡಾರಿ, ಕಾರ್ಕಳ ಶಾಖಾ ವ್ಯವಸ್ಥಾಪಕಿ ಮಾಲಿನಿ ಪ್ರಸನ್ನ ಭಂಡಾರಿ ಉಪಸ್ಥಿತರಿದ್ದರು.
















