ರಾಯಚೂರು: ಕೌನ್ ಬನೇಗಾ ಕರೋಡಪತಿ ರಿಯಾಲಿಟಿ ಶೋ ಲಕ್ಕಿ ಡ್ರಾಗೆ ಆಯ್ಕೆ ಆಗಿರುವುದಾಗಿ ದೂರವಾಣಿ ಕರೆ ಮೂಲಕ ಯುವತಿಯನ್ನು ನಂಬಿಸಿ 2,69,050 ರೂ. ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸಿರುವ ಬಗ್ಗೆ ಇಲ್ಲಿನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆಗೆಲಸ ಮಾಡಿಕೊಂಡಿದ್ದ ಆಶ್ರಯ ಕಾಲೋನಿ ನಿವಾಸಿ ನಸೀಮಾ ಮೆಹಬೂಬ್ ವಂಚನೆಗೊಳಗಾದ ಯುವತಿ.
ಕೆಬಿಸಿ ಲಕ್ಕಿ ಡ್ರಾ ₹25 ಲಕ್ಷ ಬಹುಮಾನಕ್ಕೆ ಆಯ್ಕೆ ಆಗಿರುವ ಬಗ್ಗೆ ಮೊಬೈಲ್ ಮೊದಲು ಸಂದೇಶ ಬಂದಿತ್ತು. ಆನಂತರ ಕರೆಮಾಡಿದ ವಂಚಕ, ವಿಜಯಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಹುಮಾನ ಪಡೆಯಲು ₹8,050 ಜಮಾಗೊಳಿಸುವಂತೆ ಆರಂಭದಲ್ಲಿ ತಿಳಿಸಿದ್ದ.
ಯುವತಿಯು ವಂಚಕನ ಮಾತು ನಂಬಿ ಸೆಪ್ಟೆಂಬರ್ 23 ರಿಂದ 29 ರವರೆಗೆ ಹೇಳಿದಷ್ಟು ಹಣ ಜಮೆ ಮಾಡುತ್ತಾ ಬಂದಿದ್ದಾರೆ. ಆನಂತರ ವಂಚನೆಗೊಳಗಾಗಿದ್ದು ಅರಿವಿಗೆ ಬಂದು ದೂರು ಸಲ್ಲಿಸಿದ್ದಾರೆ.