ಮಣಿಪಾಲ: ಇಲ್ಲಿನ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಐತಿಹಾಸಿಕ ಅತಿರುದ್ರಯಾಗವನ್ನು ಫೆ.25 ರಿಂದ ಮಾ. 4 ರವರೆಗೆ ಆಯೋಜಿಸಲಾಗುವುದು.
ಯಾಗದ ಕುರಿತು ನಡೆದ ಸಭೆಯ ಉದ್ಘಾಟನೆಯಲ್ಲಿ ಮಾತನಾಡಿದ ಮಣಿಪಾಲ ವಿಶ್ವ ವಿದ್ಯಾಲಯದ ಸಹಕುಲಪತಿ ಹಾಗೂ ಯಾಗ ಸಮಿತಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸಂಸ್ಥೆಯ ಪರವಾಗಿ ನೀಡಲಾಗುವುದು ಎಂದರು.
ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಠದ ಉಡುಪಿ ಶಾಖೆಯ ಧರ್ಮಾಧಿಕಾರಿ ನಾಗೇಶ್ ಶಾಸ್ತ್ರಿ ಇವರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಣಿಪಾಲ ಅರ್ಬಿ ಶ್ರೀ ವೈಷ್ಣವಿ ದೇವಸ್ಥಾನದ ಧರ್ಮದರ್ಶಿ ಜಯರಾಜ್ ಹೆಗ್ಡೆ, ರಾ.ಸ್ವ.ಸೇ.ಸಂಘದ ಉಡುಪಿ ಜಿಲ್ಲಾ ಸಂಘ ಚಾಲಕ ಡಾ. ನಾರಾಯಣ್ ಶೆಣೈ, ಶಾಸಕ ರಘುಪತಿ ಭಟ್, ನಗರಸಭಾಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಮಂಜುಳಾ ಶೆಟ್ಟಿ, ಮನೋಹರ್ ಕಲ್ಲಾಡಿ, ದಿಲೀಪ್ ರಾಜ್ ಹೆಗ್ಡೆ, ಶುಭಕ ಸಾಮಂತ್, ದಿನೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು. ಎಂಐಟಿಯ ದಿನೇಶ್ ಸಾಮಂತ ವಂದಿಸಿದರು.