ನಿಮ್ಮ ಸಂಗಾತಿಯನ್ನು ಸುಲಭವಾಗಿ ಒಲಿಸಿಕೊಳ್ಳುವುದೇಗೆ? ಹೀಗೆ ಮಾಡಿದ್ರೆ ಒಲಿಯದೇ ಇರಲು ಸಾಧ್ಯವಿಲ್ಲ!

ನಿಮ್ಮ ಗಂಡ/ಹೆಂಡತಿ ಇರಬಹುದು, ಗೆಳೆಯ/ ಗೆಳತಿಯೇ ಇರಬಹುದು. ಅವ್ರನ್ನ ಒಲಿಸಿಕೊಳ್ಳೋಕೆ, ಇನ್ನೂ ಹೆಚ್ಚು ಹೆಚ್ಚು ಪ್ರೀತಿಸೋಕೆ ನಾವೇನು ಮಾಡ್ಬೋದು ನೋಡೋಣ ಬನ್ನಿ…

ಪ್ರೀತಿಯ ಅಪ್ಪುಗೆ, ಸಿಹಿಮುತ್ತು, ದಿನದಲ್ಲಿ ಒಂದಷ್ಟು ಸಮಯ ಪ್ರೀತಿಯ ಮಾತು, ಕಾಳಜಿಯ ಆರೈಕೆ ಇವುಗಳನ್ನ ಖಂಡಿತಾ ನಿಮ್ಮ ಸಂಗಾತಿ‌ ಬಯಸುತ್ತಾರೆ.

ದೈಹಿಕ ಸುಖಕ್ಕಾಗಿ ಮಾತ್ರ ಸಂಗಾತಿಯಾಗಿರದೇ ಮಾನಸಿಕ ಸ್ಥೈರ್ಯ ನೀಡೋದೂ ನಿಮ್ಮ ಆದ್ಯ ಕರ್ತವ್ಯ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾದ್ರೆ ನೀವು ಅವರನ್ನು ಒಲಿಸಿಕೊಳ್ಳೋದು ಬಹಳಾ ಸುಲಭ.

ಒಂದು ಸಂಬಂಧದಲ್ಲಿ ಸಂಗಾತಿಗಳ ನಡುವಿನ ನಂಬಿಕೆ ಮೊದಲ ಅಸ್ತ್ರ. ನಾವು ನಮ್ಮ ಸಂಗಾತಿಯಲ್ಲಿ ಇಡುವ ನಂಬಿಕೆ ನಮ್ಮ ಸಂಬಂಧವನ್ನ ಗಟ್ಟಿಗೊಳಿಸತ್ತೆ, ಹಾಗೇ ಅವರೂ ನಮ್ಮನ್ನು ನಂಬುವಂತೆ ಮಾಡತ್ತೆ.

ನಾವು ಪರಸ್ಪರರಿಗೆ ನೀಡುವ ಗೌರವ ನಮ್ಮ ಸಂಬಂಧದ ಇನ್ನೊಂದು ಕೀಲಿಕೈ. ನಾವೆಷ್ಟೇ ಒಂದೇ ಮನೋಭಾವದವರಾಗಿದ್ರೂ ಕೂಡಾ ನಮ್ಮ ವೈಯಕ್ತಿಕ ಯೋಚನೆಗಳು ವಿಭಿನ್ನವಾಗಿದ್ದೇ ಇರುತ್ತದೆ. ಅದಕ್ಕೆ ಗೌರವ ನೀಡೋದು ಬಹಳಾ ಮುಖ್ಯ.