ಚೆನ್ನೈ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನ್ಯಾಯಮೂರ್ತಿ ಕೃಷ್ಣನ್ ರಾಮಸಾಮಿ ಅವರಿದ್ದ ಪೀಠ ಈ ತೀರ್ಪು ನೀಡಿದೆ ಪತಿ ತನ್ನ ದುಡಿಮೆಯ ಹಣದಲ್ಲಿ ಖರೀದಿಸಿದ ಆಸ್ತಿಯಲ್ಲಿ ಪತ್ನಿಗೂ ಸಮಾನ ಪಾಲು ಇದೆ ಎಂದು ನೀಡಿದೆ.ಪತಿ ಗಳಿಸಿದ ಆಸ್ತಿಯಲ್ಲಿ ಪತ್ನಿಯ ಪಾಲು ಮತ್ತು ನ್ಯಾಯಾಧೀಶರ ಭೇಟಿಯ ವೇಳೆ ನೀಡುವ ಉಡುಗೊರೆಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪತ್ನಿ ಗೃಹಿಣಿಯಾಗಿ ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿಸುವುದರಿಂದ ಪತಿಯಾದವ ಮನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಒಳಗಾಗುವುದಿಲ್ಲ. ಯಾವುದೇ ಆತಂಕವಿಲ್ಲದೆ ಮುಕ್ತವಾಗಿ, ಒತ್ತಡವಿಲ್ಲದೆ ಹೊರಗಡೆ ಕೆಲಸ ಮಾಡುತ್ತಾನೆ. ಇದು ಆಸ್ತಿ ಗಳಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಪತಿಯು ತನ್ನ ಗಳಿಕೆಯಲ್ಲಿ ಸಂಪಾದಿಸಿದ ಎಲ್ಲಾ ಆಸ್ತಿಗಳಲ್ಲಿಯೂ ಹೆಂಡತಿ ಸಮಾನ ಹಕ್ಕುದಾರಳು ಎಂದು ಕೋರ್ಟ್ ಹೇಳಿದೆ.
. ಪತಿಯ ಆಸ್ತಿಯಲ್ಲಿ ಪತ್ನಿಯರ ಪಾಲುದಾರಿಕೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಗುರುತಿಸಲು ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಕಾನೂನನ್ನು ರಚಿಸಲಾಗಿಲ್ಲ. ಅವರ ಸೇವೆಗಳನ್ನು ಗುರುತಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಪತಿ ಕುಟುಂಬದ ಆಸ್ತಿ ಸಂಪಾದಿಸುವುದರ ಹಿಂದೆ ಪತ್ನಿಯ ಪರೋಕ್ಷ ಸಹಭಾಗಿತ್ವವಿದೆ. ಮನೆಯ ಹೊಣೆ ನಿರ್ವಹಿಸುವುದರಿಂದ, ಪತಿ ಒತ್ತಡ ವಿಮುಕ್ತನಾಗಿ ಆಸ್ತಿ ಗಳಿಸಲು ಸಾಧ್ಯವಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಹೆಸರಿನಲ್ಲಿ ಈ ಬಗ್ಗೆ ಸುತ್ತೋಲೆ ಕೂಡ ಹೊರಡಿಸಲಾಗಿದೆ. ಹೈಕೋರ್ಟ್ ನ್ಯಾಯಾಧೀಶರನ್ನು ಭೇಟಿಯಾದಾಗ ಶಾಲು, ಮೂರ್ತಿಗಳು, ಹೂವು, ಹಣ್ಣು ಸೇರಿದಂತೆ ಯಾವುದೇ ಉಡುಗೊರೆಗಳನ್ನು ನೀಡಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದಲ್ಲದೇ, ಕೆಲಸದ ಸಮಯದಲ್ಲಿ ನ್ಯಾಯಾಲಯದ ಆವರಣದಿಂದ ಹೊರಬರಬಾರದು. ವಕೀಲರು ಅಥವಾ ಕಕ್ಷಿದಾರರಿಂದ ಯಾವುದೇ ಆತಿಥ್ಯ ಸ್ವೀಕರಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಮೇಲಾಗಿ ಅಧಿಕಾರಿಗಳು ನ್ಯಾಯಾಧೀಶರನ್ನು ನೇರವಾಗಿ ಸಂಪರ್ಕಿಸಬಾರದು. ತುರ್ತು ವಿಚಾರವಾದಲ್ಲಿ ಮೊದಲೇ ಅನುಮತಿ ಪಡೆದಿರಬೇಕು ಎಂದು ತಿಳಿಸಿದೆ.
ಇದರ ಜತೆಗೆ ನ್ಯಾಯಾಧೀಶರ ವೇಷಭೂಷಣಕ್ಕೆ ಸಂಬಂಧಿಸಿದಂತೆಯೂ ಕೆಲ ಸಲಹೆಗಳನ್ನು ನೀಡಿದ್ದು, ನ್ಯಾಯಾಲಯದ ಆವರಣದ ಹೊರಗೆ ಜಡ್ಜ್ ಆದವರು ಕಪ್ಪು ಕೋಟ್ ಮತ್ತು ಟೈ ಧರಿಸಬಾರದು. ಈ ನಿಬಂಧನೆಗಳನ್ನು ಎಲ್ಲಾ ನ್ಯಾಯಾಲಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲ ಹಂತದ ಕೋರ್ಟ್ಗಳಿಗೆ ಸೂಚಿಸಿದೆ.
ಪತ್ನಿಯ ಹೊಣೆಗಾರಿಕೆಯನ್ನು ಗಮನಿಸಿರುವ ಕೋರ್ಟ್, ಕುಟುಂಬ ಮತ್ತು ಮಕ್ಕಳನ್ನು ಆಕೆ ನೋಡಿಕೊಳ್ಳುತ್ತಾಳೆ. ಕೊನೆಗೆ ಆಕೆಗೆ ತನ್ನದು ಎಂದು ಹೇಳಿಕೊಳ್ಳಲು ಏನೂ ಉಳಿದಿರುವುದಿಲ್ಲ. ಕುಟುಂಬದ ಅಭಿವೃದ್ಧಿಗಾಗಿ ಆಸ್ತಿ ವಿಚಾರದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ನೇರ ಅಥವಾ ಪರೋಕ್ಷವಾಗಿ ಭಾಗಿದಾರರು. ಇಬ್ಬರಿಗೂ ಸಮಾನ ಪಾಲು ಇರಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಜಡ್ಜ್ಗಳಿಗೆ ಉಡುಗೊರೆ, ಶಾಲು ನೀಡಬೇಡಿ: ನ್ಯಾಯಾಧೀಶರ ಭೇಟಿ ಮತ್ತು ಅವರಿಗೆ ಸನ್ಮಾನದ ಕುರಿತಾಗಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರ ಭೇಟಿಯ ವೇಳೆ ಶಾಲು, ಹೂಗುಚ್ಛ, ಉಡುಗೊರೆ ಸೇರಿದಂತೆ ಯಾವುದೇ ವಸ್ತುಗಳನ್ನು ನೀಡುವಂತಿಲ್ಲ. ನ್ಯಾಯಾಂಗದ ಅಧಿಕಾರಿಗಳು ವರ್ಗಾವಣೆ, ಬಡ್ತಿಗಾಗಿ ಜಡ್ಜ್ಗಳ ಮನೆಗೆ ಎಡತಾಕುವಂತಿಲ್ಲ ಎಂದು ತಮಿಳುನಾಡು ಮತ್ತು ಪುದುಚೇರಿ ಪ್ರಕರಣದಲ್ಲಿ ಆದೇಶಿಸಿದೆ.